ಉಡುಪಿ: ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಮಟ್ಟದ ಚೆಸ್ ಪಂದ್ಯಾವಳಿಯ ಉದ್ಘಾಟನೆ ಶುಕ್ರವಾರ ಪೂರ್ಣಪ್ರಜ್ಞ ಆಡಳಿತ ಸಂಸ್ಥೆಯ ಪ್ರಜ್ಞಾ ಸಭಾಂಗಣದಲ್ಲಿ ಜರಗಿತು.
ಅದಮಾರು ಮಠದ ಶ್ರೀ ವಿಶ್ವಪ್ರೀಯ ತೀರ್ಥ ಸ್ವಾಮೀಜಿಯವರು ಪಂದ್ಯಾಟಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ, ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ, ಶಿಕ್ಷಣ ಕ್ಷೇತ್ರಕ್ಕೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಕೊಡುಗೆ, ಅದರಲ್ಲೂ ಅದಮಾರು ಮಠದಿಂದ ದೇಶದ ವಿವಿಧ ಬಾಗಗಳಲ್ಲಿ ಸ್ಥಾಪಿಸಲ್ಪಟ್ಟ ಹಲವಾರು ಶಿಕ್ಷಣ ಸಂಸ್ಥೆಗಳ ಕೊಡುಗೆಯನ್ನು ಶ್ಲಾಗಿಸಿದರು.
ಉಡುಪಿ ಮತ್ತು ದಕ್ಷಿಣ ಕನ್ನಡ ಮೀನುಗಾರಿಕೆ ಒಕ್ಕೂಟದ ಅದ್ಯಕ್ಷರಾದ ಯಶಪಾಲ, ಆನಂದ ಸುವರ್ಣ, ಸಂಸ್ಥೆಯ ಕೋಶಾಧಿಕಾರಿ ಪ್ರದೀಪ್ ಕುಮಾರ್, ದೈಹಿಕ ಶಿಕ್ಷಣ ನಿರ್ದೇಶಕ ಸುಕುಮಾರ್ ಉಪಸ್ಥಿತರಿದ್ದರು.
ಪಿ. ಐ. ಎಮ್‌ನ ನಿರ್ದೇಶಕ ಡಾ. ಭರತ್ ಸ್ವಾಗತಿಸಿ, ಡಾ. ಸುರೇಶರಮಣ ಮಯ್ಯ ವಂದಿಸಿದರು. ಡಾ. ಭಾರತಿ ಕಾರಂತ್
ಕಾರ್ಯಕ್ರಮ ನಿರೂಪಿಸಿದರು.