ಉಡುಪಿ: ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ ಅಧಿನಿಮಯ 1997 ರ
ಕಲಂ 25 ರನ್ವಯ ಹಾಗೂ ಜಿಲ್ಲಾ ಧಾರ್ಮಿಕ ಪರಿಷತ್ ಸಭೆಯ ನಿರ್ಣಯದಂತೆ ಜಿಲ್ಲೆಯಲ್ಲಿರುವ ಪ್ರವರ್ಗ ಬಿ ಗೆ ಸೇರಿದ 01 ಹಾಗೂ ಸಿ ಗೆ ಸೇರಿದ 22 ಒಟ್ಟು 23 ದೇವಸ್ಥಾನಗಳಿಗೆ ವ್ಯವಸ್ಥಾಪನ ಸಮಿತಿಯನ್ನು ಮೂರು ವರ್ಷಗಳ ಅವಧಿಗೆ ರಚಿಸಲು ಆಸಕ್ತ ಭಕ್ತಾದಿಗಳು ಹಾಗೂ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ಪ್ರವರ್ಗ ಬಿ ದೇವಸ್ಥಾನದ ವಿವರ: ಬ್ರಹ್ಮಾವರ ತಾಲೂಕು ಆರೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ.
ಪ್ರವರ್ಗ ಸಿ ದೇವಸ್ಥಾನದ ವಿವರ:
ಬೈಂದೂರು ತಾಲೂಕು ನಾವುಂದ ಗ್ರಾಮದ ಅರೆಹೊಳೆ ಶ್ರೀ ವಿನಾಯಕ ದೇವಸ್ಥಾನ, ಹೇರಂಜಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹಾಗೂ ಮಸ್ಕಿ ಹೆರಂಜಾಲು ಶ್ರೀ ಗೋಪಾಲ ಮತ್ತು ವಿನಾಯಕ ದೇವಸ್ಥಾನ. ಕುಂದಾಪುರ ತಾಲೂಕು ಮೊಳಹಳ್ಳಿ ಶ್ರೀ ಉಮಾಮಹೇಶ್ವರ ದೇವಸ್ಥಾನ, ಉಪ್ಪಿನಕುದ್ರು ಶ್ರೀ ಸಿದ್ಧಿ ವಿನಾಯಕ ದೇವಸ್ಥಾನ, ಸೇನಾಪುರದ ಬೆಳವಿನಮಕ್ಕಿ ಶ್ರೀ ಮಹಾಗಣಪತಿ ದೇವಸ್ಥಾನ, ಕೊಡ್ಲಾಡಿ ಕೂಡಿಗೆ ಶ್ರೀ ಚಿತ್ತಾರಿ ಬ್ರಹ್ಮಲಿಂಗ ದೇವಸ್ಥಾನ, ಮಚ್ಚಟ್ಟು ವಿನಾಯಕ ದೇವಸ್ಥಾನ, ಕುಂದಬಾರಂದಾಡಿ ಶ್ರೀ ಮಾಣಿಕೊಳಲು ಚೆನ್ನಕೇಶವ
ದೇವಸ್ಥಾನ ಹಾಗೂ ಹಾಲಾಡಿ ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನ. ಬ್ರಹ್ಮಾವರ ತಾಲೂಕು ಹೊಸಾಳ ಬಪ್ಪಲಾಪುರ ಶ್ರೀ ವಿನಾಯಕ ದೇವಸ್ಥಾನ, ಶ್ರೀ ಮಾಣಿಗರಕೇರಿ ಶ್ರೀ ಸೋಮನಾಥ ದೇವಸ್ಥಾನ, ವಾರಂಬಳ್ಳಿಯ ಬನ್ನಿ ಮಹಾಕಾಲಿ ದೇವಸ್ಥಾನ ಮತ್ತು ಶ್ರೀ ವೈದ್ಯನಾಥೇಶ್ವರ ದೇವಸ್ಥಾನ ಹಾಗೂ ಕುಕ್ಕಿಕಟ್ಟೆ ಬೆಳ್ಳಂಪಳ್ಳಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ. ಉಡುಪಿ ತಾಲೂಕಿನ ಬೆಳ್ಳರ್ಪಾಡಿ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ, ಹೆರ್ಗ ಪರ್ಕಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹಾಗೂ ನಿಟ್ಟೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ. ಕಾರ್ಕಳ ತಾಲೂಕಿನ ಕೆಪ್ಲಾಜೆ ಶ್ರೀ ಮಹಾಮ್ಮಾಯಿ ದೇವಿ ಗುಡಿ ಮತ್ತು ಹೆಬ್ರಿ ತಾಲೂಕಿನ ಅರಸಮ್ಮನಕಾನು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಕೆರೆಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹಾಗೂ ಬೇಳಂಜೆ ಶ್ರೀ ಮಹಿಷಮರ್ಧಿನಿ
ದೇವಸ್ಥಾನ.
ಮರುಪ್ರಕಟಣೆ ಹೊರಡಿಸಲಾದ ದೇವಸ್ಥಾನಗಳ ವಿವರ: ಬೈಂದೂರು ತಾಲೂಕು ಬಡಾಕೆರೆ ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನ (ಪ.ಜಾತಿ/ ಪ.ಪಂಗಡದ ಒಂದು ಸ್ಥಾನಕ್ಕೆ ಮಾತ್ರ), ಕಾರ್ಕಳ ತಾಲೂಕು ನೀರೆ ಗ್ರಾಮದ ಶ್ರೀ ಕೊಡಮಣಿತ್ತಾಯ ಬಹ್ಮ ಬೈದರ್ಕಳ ಗರಡಿ (ಸಾಮಾನ್ಯ ವರ್ಗದ ಒಂದು ಸ್ಥಾನಕ್ಕೆ ಮಾತ್ರ) ಹಾಗೂ ಬ್ರಹ್ಮಾವರ ತಾಲೂಕು ಹನೆಹಳ್ಳಿ ಗ್ರಾಮದ ಬಾರ್ಕೂರು ಶ್ರೀ ಸೋಮೇಶ್ವರ ದೇವಸ್ಥಾನ (ಸಾಮಾನ್ಯ ವರ್ಗದ ಒಂದು ಸ್ಥಾನಕ್ಕೆ ಮಾತ್ರ ಮರು ಪ್ರಕಟಣೆ).
ಕನಿಷ್ಠ 25 ವರ್ಷ ಮೇಲ್ಪಟ್ಟ ಆಸಕ್ತ ಭಕ್ತಾದಿಗಳು ಯಾವುದೇ ಒಂದು ಅಧಿಸೂಚಿತ ಸಂಸ್ಥೆಯ/ ದೇವಾಲಯದ ವ್ಯವಸ್ಥಾಪನಾ ಸಮಿತಿಗೆ ಮಾತ್ರ ಸದಸ್ಯತ್ವ ಕೋರಿ ಅರ್ಜಿಯನ್ನು ನಮೂನೆ-1(ಬಿ) (22 ನೇ ನಿಯಮ) ನಮೂನೆಯಲ್ಲಿ ಭರ್ತಿ ಮಾಡಿದ ಅರ್ಜಿಯನ್ನು ಜುಲೈ 25 ರ ಒಳಗಾಗಿ ಸಲ್ಲಿಸಬಹುದಾಗಿದೆ.
ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಹಾಯಕ ಆಯುಕ್ತರು, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ, ಕೊಠಡಿ ಸಂಖ್ಯೆ 206, ಬಿ ಬ್ಲಾಕ್, ಜಿಲ್ಲಾ ಸಂಕೀರ್ಣ, ರಜತಾದ್ರಿ, ಮಣಿಪಾಲ ಉಡುಪಿ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.












