ಉಡುಪಿ: ಮೀನುಗಾರಿಕೆ ಇಲಾಖೆ ಉಡುಪಿ, ರಕ್ತನಿಧಿ ಕೇಂದ್ರ ಜಿಲ್ಲಾ ಆಸ್ಪತ್ರೆ ಉಡುಪಿ, ರಕ್ತನಿಧಿ ಕೇಂದ್ರ ಕೆ.ಎಂ.ಸಿ ಮಣಿಪಾಲ, ಕರಾವಳಿ ಕಾವಲು ಪೊಲೀಸ್, ಮಲ್ಪೆ ಮೀನುಗಾರರ ಸಂಘ (ರಿ), ಮಲ್ಪೆ ಬಂದರು ಸಹಕಾರಿ ನೌಕರರ ಸಂಘ, ಕನ್ನಿ ಪಾರ್ಟಿ ಮೀನುಗಾರರ ಸಂಘ ಮಲ್ಪೆ, ಸೀ ಎಂಸಿ2 ಮತ್ತು ಕೆನರಾ ಬ್ಯಾಂಕ್ ಹಾಗೂ ಮಲ್ಪೆ ಬಂದರಿನ ಎಲ್ಲಾ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಬೃಹತ್ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಕಾರ್ಯಕ್ರಮವು ಫೆಬ್ರವರಿ 5 ರಂದು ಬೆಳಗ್ಗೆ 9.30 ಕ್ಕೆ ಮಲ್ಪೆ ಕರಾವಳಿ ಕಾವಲು ಪೊಲೀಸ್ ಬಂದರು ಇಲ್ಲಿನ ಪೊಲೀಸ್ ಅಧೀಕ್ಷಕರ ಕಚೇರಿ ಆವರಣದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
















