ಉಡುಪಿ:: ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ 2019-20 ನೇ ಸಾಲಿನಲ್ಲಿ ಅನುಷ್ಟಾನಗೊಳ್ಳಲಿರುವ ಮಹಿಳಾ ಶಕ್ತಿ ಕೇಂದ್ರಯೋಜನೆಯಡಿ, ಜಿಲ್ಲೆಯಲ್ಲಿ ಒಬ್ಬರು ಮಹಿಳಾ ಕಲ್ಯಾಣಾಧಿಕಾರಿ ಹುದ್ದೆಗೆಹ್ಯುಮಾನಿಟೀಸ್/ಸಮಾಜವಿಜ್ಞಾನ, ಸಮಾಜ ಕಾರ್ಯದಲ್ಲಿ ಸ್ನಾತಕೋತ್ತರ ಪದವಿ ಹೊಂದಿದ,ಮಹಿಳೆಯರ ಸಬಲೀಕರಣಕ್ಕಾಗಿ ಕೆಲಸ ಮಾಡಿದ ಅನುಭವ ಹೊಂದಿರುವ, ಕಂಪ್ಯೂಟರ್ ಬಳಕೆಬಗ್ಗೆ ಪ್ರಾವೀಣ್ಯತೆ ಇರುವ ಸ್ಥಳೀಯ ಮಹಿಳಾ ಅಭ್ಯರ್ಥಿಗಳಿಂದ 35000 ರೂ. ಗೌರವಧನ ಆಧಾರದಲ್ಲಿ ಹಾಗೂ ಜಿಲ್ಲಾ ಸಂಯೋಜನಾಧಿಕಾರಿಯ ಎರಡು ಹುದ್ದೆಗಳಿಗೆ ಹ್ಯುಮಾನಿಟೀಸ್/ಸಮಾಜವಿಜ್ಞಾನ, ಸಮಾಜ ಕಾರ್ಯದಲ್ಲಿ ಪದವಿ ಹೊಂದಿದ, ಮಹಿಳೆಯರ ಸಬಲೀಕರಣಕ್ಕಾಗಿ ಕೆಲಸ ಮಾಡಿದ ಅನುಭವ ಹೊಂದಿರುವ, ಕಂಪ್ಯೂಟರ್ ಬಳಕೆ ಬಗ್ಗೆ ಪ್ರಾವೀಣ್ಯತೆ ಇರುವ ಸ್ಥಳೀಯ ಅಭ್ಯರ್ಥಿಗಳಿಂದ 20000 ರೂ. ಗೌರವಧನ ಆಧಾರದಲ್ಲಿ ಗರಿಷ್ಠ 35
ವರ್ಷ ಒಳಗಿನ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಹುದ್ದೆಗಳು ಕರಾರಿನ ಆಧಾರದ ಮೇಲೆ ತಾತ್ಕಾಲಿಕವಾಗಿದ್ದು, ಆಸಕ್ತಿಯಿರುವ ಅರ್ಹ ಮಹಿಳಾ
ಅಭ್ಯರ್ಥಿಗಳು ಜೂನ್ 29 ರ ಒಳಗೆ ಅರ್ಜಿಯನ್ನು ಸೂಕ್ತ ದಾಖಲೆಗಳೊಂದಿಗೆ ಉಪನಿರ್ದೇಶಕರ
ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಜತಾದ್ರಿ ಮಣಿಪಾಲ ಇವರಿಗೆ
ಸಲ್ಲಿಸುವುದು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0820-2574978ನ್ನು ಸಂಪರ್ಕಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿದೇಶಕರ ಪ್ರಕಟಣೆ ತಿಳಿಸಿದೆ.