ಉಡುಪಿ:ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ತಾ 23.09.25 ರಂದು ಮಾಹೆ ಮಣಿಪಾಲ ಇದರ ವಿವಿಧ ಅಂಗಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಅಧ್ಯಾಪಕ ವೃಂದದ ಶಾಸ್ತ್ರೀಯ ಸಂಗೀತ ಗಾರರ ತಂಡವಾದ ಸುಶ್ರಾವ್ಯ ತಂಡದಿಂದ ಶಾಸ್ತ್ರಿಯ ಸಂಗೀತ ಕಛೇರಿ ನಡೆಯಿತು.
ಹಾಡುಗಾರಿಕೆಯಲ್ಲಿ ಎಂಐಟಿಯ ಡಾ. ವಿದ್ಯಾ ಎಸ್ ರಾವ್, ಡಾ. ಭಾಗ್ಯ ,ಡಾ. ರಮ್ಯಾ ಡಾ. ಶಿಲ್ಪ ಡಾ. ಚೈತ್ರ, ಪ್ರೊ. ಸೌಮ್ಯ , ಪ್ರೊ. ರಜಿತ, ಪ್ರೊ. ಪೃಥ್ವಿ ಭಾಗವಹಿಸಿದ್ದರು. ಹಿಮ್ಮೇಳದಲ್ಲಿ ಕೆ.ಎಂಸಿ ಯ ಪ್ರಾದ್ಯಾಪಕ ಡಾ. ಕೃಷ್ಣಪ್ರಸಾದ್ ಇವರು ಘಟಂ ಹಾಗೂ ಮೃದಂಗ , ಡಾ| ಸುಹಾಸ್ ವಯಲಿನ್ ನುಡಿಸಿ ಅದ್ಭುತ ಪ್ರದರ್ಶನ ವಿತ್ತರು. ವಿದ್ವಾನ್ ಬಾಲಚಂದ್ರ ಭಾಗವತ್ ಮೃದಂಗದಲ್ಲಿ ಸಾಥ್ ನೀಡಿದರು.

ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆಯವರು ಹಾಗೂ ಶ್ರೀಮತಿ ಹೇಮಾವತಿ ಹೆಗ್ಗಡೆಯವರು ಉಪಸ್ಥಿತರಿದ್ದು ವೃತ್ತಿಯ ನಡುವೆಯೂ ಪ್ರವೃತ್ತಿಯನ್ನು ಬೆಳಿಸಿಕೊಂಡು ಬಂದಿರುವ ಸುಶ್ರಾವ್ಯ ತಂಡದ ಪರಿಶ್ರಮವನ್ನು ಶ್ಲಾಘಿಸಿದರು. ಕ್ಷೇತ್ರದ ಆಡಳಿತ ವರ್ಗದವರು ತಂಡಕ್ಕೆ ಶ್ರೀ ಮಂಜುನಾಥ ಹಾಗೂ ಅಮ್ಮನವರ ದರ್ಶನ ಮಾಡಿಸಿ ಪ್ರಸಾದ ಇತ್ತು ಶುಭ ಹಾರೈಸಿದರು .
ತಂಡವು ಶ್ರೀ ಆದಿ ಶಂಕರಾಚಾರ್ಯರು, ಶ್ರೀ ಶ್ರೀ ಚಂದ್ರಶೇಖರ ಭಾರತೀ , ಶ್ರೀಮುತ್ತುಸ್ವಾಮಿ ದೀಕ್ಷಿತರು , ಶ್ರೀ ಮಹಾ ವೈದ್ಯಾನಾಥನ್ ಐಯ್ಯರ್, ಶ್ರೀ ತಂಜಾವೂರ್ ಶಂಕರ ಐಯ್ಯರ್, ಸ್ವಾತಿ ತಿರುನಾಳ್ ಮಹಾರಾಜರು, ಶ್ರೀ ವಾದಿರಾಜರು ಮುಂತಾದ ವಾಗ್ಗೇಯಕಾರರು ರಚಿಸಿದ ಕೃತಿಗಳನ್ನು ಆಯ್ದು ಸುಮಾರು 2 ಗಂಟೆಗಳ ಕಾಲ ಹಾಡಿದರು. ಸಭಿಕರಿಂದ ತುಂಬು ಮೆಚ್ಚುಗೆ ವ್ಯಕ್ತವಾಯಿತು. ಈ ಕಾರ್ಯಕ್ರಮವನ್ನು ಆಸಕ್ತರು ಈ ಲಿಂಕ್ ಮುಖಾಂತರ ವೀಕ್ಷಿಸಬಹುದು.
https://www.youtube.com/live/wnUCarE9Pg0?si=5KBnVf3wlAMjN8GL


















