ಉಡುಪಿ:ಮಾಹೆ ಮಣಿಪಾಲ ಸುಶ್ರಾವ್ಯ ತಂಡದಿಂದ ರಾಜಾಂಗಣದಲ್ಲಿ ಕಾರ್ಯಕ್ರಮ

ಉಡುಪಿ:ಮಾಹೆ ಮಣಿಪಾಲ ಇದರ ವಿವಿಧ ಅಂಗಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಅಧ್ಯಾಪಕ ವೃಂದದ ಶಾಸ್ತ್ರೀಯ ಸಂಗೀತ ಕಾರರ ತಂಡವಾದ ಸುಶ್ರಾವ್ಯ ಸಂಘಟನೆಯಿಂದ ಉಡುಪಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಜರಗುತ್ತಿದ್ದ 48 ದಿನಗಳ ಮಂಡಲೊತ್ಸವ ಕಾರ್ಯಕ್ರಮದಲ್ಲಿ ತಾರೀಕು 16.09.2025 ರಂದು ಶಾಸ್ತ್ರೀಯ ಸಂಗೀತ ಕಚೇರಿ ನೆರವೇರಿತು.

ಹಾಡುಗಾರಿಕೆಯಲ್ಲಿ ಎಂಐಟಿಯ ಡಾ. ವಿದ್ಯಾ ಎಸ್ ರಾವ್ ಡಾ. ಭಾಗ್ಯ ,ಡಾ. ರಮ್ಯಾ ಡಾ. ಶಿಲ್ಪ ಡಾ. ಚೈತ್ರ ಪ್ರೊ. ಸೌಮ್ಯ , ಪ್ರೊ. ರಜಿತ ಭಾಗವಹಿಸಿದರು. ಹಿಮ್ಮೇಳದಲ್ಲಿ ಕೆ.ಎಂಸಿ ಯ ಪ್ರಾದ್ಯಾಪಕ ಡಾ. ಕೃಷ್ಣಪ್ರಸಾದ್ ಇವರು ಘಟಂ ಹಾಗೂ ಮೃದಂಗದಲ್ಲಿ , ವಯಲಿನ್ ನಲ್ಲಿ ಡಾ| ಸುಹಾಸ್ ಪ್ರದರ್ಶನ ವಿತ್ತರು. ವಿದ್ವಾನ್ ಬಾಲಚಂದ್ರ ಭಾಗವತ್ ಮೃದಂಗದಲ್ಲಿ ಸಾಥ್ ನೀಡಿದರು. ಪರ್ಯಾಯ ಪೀಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥರು ಉಪಸ್ಥಿತರಿದ್ದು ತಂಡಕ್ಕೆ ಮಂತ್ರಾಕ್ಷತೆ ಹಾಗೂ ಪ್ರಸಾದ ಇತ್ತು ಶುಭ ಹಾರೈಸಿದರು.

ತಂಡವು ಶ್ರೀ ವಾದಿರಾಜರು, ಶ್ರೀಮುತ್ತುಸ್ವಾಮಿ ದೀಕ್ಷಿತರು , ಶ್ರೀ ತ್ಯಾಗರಾಜರು , ಶ್ರೀ ಸ್ವಾತಿ ತಿರುನಾಳ್ ಮಹಾರಾಜರು, ಪುರಂದರದಾಸರು ಇತ್ಯಾದಿ ವಾಗ್ಗೇಯಕಾರರು ರಚಿಸಿದ ಕೃತಿಗಳನ್ನು ಆಯ್ದು ಸುಮಾರು 2 ಗಂಟೆಗಳ ಕಾಲ ಹಾಡಿದರು. ಸಭಿಕರಿಂದ ತುಂಬು ಮೆಚ್ಚುಗೆ ವ್ಯಕ್ತವಾಯಿತು.ಈ ಕಾರ್ಯಕ್ರಮವು ತಿರುಪತಿ ತಿರುಮಲ ದೇವಸ್ಥಾನ ಟ್ರಸ್ಟ್ ಇವರ ಚಾನೆಲ್ ಮೂಲಕವೂ ಪ್ರಸಾರವಾಯಿತು.