ಉಡುಪಿ:ಭಾರತೀಯ ಅಂಚೆ ಇಲಾಖೆಯು ತನ್ನ ವ್ಯಾಪಾರ ಅಭಿವೃದ್ಧಿ ಚಟುವಟಿಕೆಗಳನ್ನು ಹೆಚ್ಚಿಸುವ ಉದ್ದೇಶದಿಂದ ದಿನಾಂಕ 8ನೇ ಸೆಪ್ಟೆಂಬರ್ 2025 ರಿಂದ 13ನೇ ಸೆಪ್ಟೆಂಬರ್ 2025 ರವರೆಗೆ “ಮಹಾ ಉದ್ಯಮ ಸಪ್ತಾಹ”ವನ್ನು ಆಯೋಜಿಸಿದೆ.
ಈ ಅಭಿಯಾನದ ಮುಖ್ಯ ಗುರಿ ಸಣ್ಣ ಮತ್ತು ದೊಡ್ಡ ಉದ್ಯಮಿಗಳು, ವ್ಯಾಪಾರಸ್ಥರು ಹಾಗೂ ಸಾರ್ವಜನಿಕರಿಗೆ, ಭಾರತೀಯ ಅಂಚೆಯ ವಿಶ್ವಾಸಾರ್ಹ ಸೇವೆಗಳ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸುವುದಾಗಿದೆ.
ಈ ಸಪ್ತಾಹದಲ್ಲಿ ಅಂಚೆ ಸಿಬ್ಬಂದಿಗಳು ಪ್ರತಿಯೊಬ್ಬರನ್ನು ಭೇಟಿ ಮಾಡಿ ಅಂಚೆ ಇಲಾಖೆಯಲ್ಲಿ ಲಭ್ಯವಿರುವ್ವ ತ್ವರಿತ, ಸುರಕ್ಷಿತ ಮತ್ತು ಮಿತ ದರದಲ್ಲಿ ಸ್ಪೀಡ್ ಪೋಸ್ಟ್ (ಡಾಕ್ಯುಮೆಂಟ್ ಮತ್ತು ಪಾರ್ಸೆಲ್), ಪಾರ್ಸೆಲ್ ಸೇವೆಗಳು ದೇಶದ ಯಾವುದೇ ಮೂಲೆಗೆ ಕಳುಹಿಸಬಹುದಾಗಿದ್ದು ಹಾಗೂ ಜಗತ್ತಿನಾದ್ಯಂತ ವೇಗವಾಗಿ ತಲುಪಿಸುವ ಅಂತರರಾಷ್ಟ್ರೀಯ ಅಂಚೆ ಸೇವೆಗಳ ಕುರಿತು ಮಾಹಿತಿ ನೀಡಲಿದ್ದಾರೆ.
ಈ ಅಭಿಯಾನದ ಸದುಪಯೋಗವನ್ನು ಪಡೆದುಕೊಂಡು ತಮ್ಮ ವ್ಯಾಪಾರವನ್ನು ವೃದ್ಧಿಸಲು ಅಂಚೆ ಸೇವೆಗಳನ್ನು ಬಳಸಿಕೊಳ್ಳಲು ಸಾರ್ವಜನಿಕರಲ್ಲಿ ಮತ್ತು ಉದ್ಯಮಿಗಳಲ್ಲಿ ವಿನಂತಿಸಲಾಗಿದೆ ಎಂದು ಅಂಚೆ ಅಧೀಕ್ಷಕರು ಉಡುಪಿ ವಿಭಾಗ, ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.















