ಡಾ. ಮಾಧವ ಪೈಗಳ ಸಾಧನೆ, ಯೋಜನೆ ನಮ್ಮೆಲ್ಲರ ಬದುಕಿಗೆ ವರದಾನ- ಡಾ. ರವಿರಾಜ ಎನ್. ಸೀತಾರಾಮ

ಉಡುಪಿ: ಡಾ.ಮಾಧವ ಪೈಯವರ ಶೈಕ್ಷಣಿಕ ಬ್ಯಾಂಕಿಂಗ್ ಆರೇೂಗ್ಯ ಕ್ಷೇತ್ರಗಳ ಕಾರ್ಯಯೇೂಜನೆಗಳಿಂದು ನಮ್ಮೆಲ್ಲರ ಬದುಕಿಗೆ ವರದಾನವಾಗಿ ಮೂಡಿಬಂದಿದೆ. ನಾವು ಎಷ್ಟೇ ವಿದ್ಯಾವಂತರಾದರೂ ಹೆತ್ತ ತಾಯಿ ಹಾಗೂ ಹುಟ್ಟೂರನ್ನು ಮರೆಯಲೇಬಾರದು ಅನ್ನುವುದು ಡಾ। ಮಾಧವ ಪೈ ಅವರ ಬದುಕಿನ ಸಂದೇಶವೂ ಆಗಿತ್ತು.

ಸ್ಥಳೀಯವಾಗಿ ಸಂಶೋಧನೆ ಮತ್ತು ಉದ್ಯೋಗದ ಅವಕಾಶವೂ ಸಾಕಷ್ಟು ನಮ್ಮಲ್ಲಿದೆ.ಅದನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿದ್ಯಾರ್ಥಿಗಳು ಮುಂದಾಗಬೇಕು. ತಾವು ಕಲಿತ ವಿದ್ಯಾಸಂಸ್ಥೆಗೆ ಹಳೆ ವಿದ್ಯಾರ್ಥಿಗಳು ಹಲವು ರೀತಿಯಲ್ಲಿ ಪ್ರೇೂತ್ಸಾಹಿಸಲು ಅವಕಾಶವಿದೆ. ಹಳೆ ವಿದ್ಯಾರ್ಥಿಗಳು ತಮ್ಮ ಸಂಸ್ಥೆಯ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಿಸುವ ಮೂಲಕ‍ ತಮ್ಮಮಾತೃ ಸಂಸ್ಥೆಯ ಜತೆ ಅನ್ಯೇೂನ್ಯ ಸಂಬಂಧ ಬೆಳಸಿಕೊಳ್ಳಬೇಕು ಎಂದು ಚಂಡೀಗಢ ವಿವಿ ಕುಲಪತಿ ಡಾ। ರವಿರಾಜ ಎನ್.ಸೀತಾರಾಮ ಹೇಳಿದರು.

ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ರವಿವಾರ ನಡೆದ ಹಳೆವಿದ್ಯಾರ್ಥಿಗಳ ಸಮಾವೇಶದಲ್ಲಿ ಅವರು ಮಾತನಾಡಿದರು.
ಎಂಜಿಎಂ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ। ಎಂ.ಎಲ್.ಸಾಮಗ ಕಾರ್ಯಕ್ರಮ ಉದ್ಘಾಟಿಸಿ ಶುಭಕೇೂರಿ, ಮಾತನಾಡಿದರು.

ಸಭಾಧ್ಯಕ್ಷತೆಯನ್ನು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ವಹಿಸಿದ್ದರು. ಬೆಂಗಳೂರಿನ ಎಸ್‌ಎಸ್‌ ವಿ ಅಕಾಡೆಮಿಯ ಚೇರ್ಮನ್ ಡಾ। ಸುಧೀರ್ ಪೈ ಕೆ.ಎಲ್., ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ನ ಆಡಳಿತಾಧಿಕಾರಿ ಡಾ। ಕೆ.ಶ್ರೀಧರ್ ಆರ್.ಪೈ, ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಪ್ರೊ। ವನಿತಾ ಮಯ್ಯ, ಪಿಯು ಕಾಲೇಜಿನ ಪ್ರಾಂಶುಪಾಲೆ ಪ್ರೊ। ಮಾಲತಿ ದೇವಿ ಉಪಸ್ಥಿತರಿದ್ದರು.

ಎಂಜಿಎಂ ಕಾಲೇಜಿನ ಉಪಪ್ರಾಂಶುಪಾಲ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಡಾ. ಎಂ.ವಿಶ್ವನಾಥ ಪೈ ಸ್ವಾಗತಿಸಿದರು.ಕೇೂಶಾಧಿಕಾರಿ ದೀಪಾಲಿ ಕಾಮತ್ ಹಣಕಾಸು ವರದಿ ವಾಚಿಸಿದರು ಕಾರ್ಯಕ್ರಮ ಸಂಯೋಜಕ ಡಾ। ವಿಜಯೇಂದ್ರ ರಾವ್ ವಂದಿಸಿದರು. ಡಾ। ಪೂರ್ಣ ಕಾಮತ್ ನಿರೂಪಿಸಿದರು.