ಉಡುಪಿ: ಕೊರೊನಾ ಹೆಚ್ಚಿರುವ ಪಂಚಾಯತ್ ಗಳಲ್ಲಿ ಪೂರ್ತಿ ಲಾಕ್ ಡೌನ್; ಯಾವುದಕ್ಕಿದೆ ಅವಕಾಶ?, ಯಾವುದಕ್ಕಿಲ್ಲ?

ಉಡುಪಿ (ಉಡುಪಿ ಎಕ್ಸ್‌ಪ್ರೆಸ್ ವರದಿ): ಜಿಲ್ಲೆಯಲ್ಲಿ 50ಕ್ಕಿಂತ ಅಧಿಕ ಸೋಂಕಿತರಿರುವ ಗ್ರಾಮಗಳಲ್ಲಿ ಜೂನ್ 2ರಿಂದ ಐದು ದಿನ ಸಂಪೂರ್ಣ ಲಾಕ್ ಡೌನ್ ಘೋಷಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಲಾಕ್ ಡೌನ್ ಘೋಷಿಸಲಾಗಿರುವ ಪಂಚಾಯತ್ ಗಳಲ್ಲಿ ನಾಳೆ (ಜೂನ್ 1) ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಹೀಗಾಗಿ ಲಾಕ್ ಡೌನ್ ಘೋಷಣೆಯಾಗಿರುವ ಗ್ರಾಮಸ್ಥರು ಐದು ದಿನಗಳಿಗೆ ಬೇಕಾಗುವ ಅಗತ್ಯ ವಸ್ತುಗಳನ್ನು ನಾಳೆಯೇ ಖರೀದಿಸಬೇಕು. ಉಳಿದಂತೆ ಮುಂದಿನ ಐದು ದಿನಗಳ ಕಾಲ ಪೂರ್ತಿ ಲಾಕ್ ಡೌನ್ ಇರಲಿದೆ.

ಯಾವುದಕ್ಕೆ ಅವಕಾಶ, ಯಾವುದಕ್ಕಿಲ್ಲ:
ಜೂನ್ 2ರ ಬೆಳಿಗ್ಗೆ 6ಗಂಟೆಯಿಂದ ಜೂನ್ 7ರ ಬೆಳಿಗ್ಗೆ 6 ಗಂಟೆಯವರೆಗೆ ಪೂರ್ತಿ ಲಾಕ್ ಡೌನ್ ಜಾರಿಯಲ್ಲಿರಲಿದೆ. ಈ ವೇಳೆ ಐದು ದಿನಗಳ ಆಯಾ ಪಂಚಾಯತ್ ವ್ಯಾಪ್ತಿಯ ಅಂಗಡಿಗಳು ಸಂಪೂರ್ಣ ಬಂದ್ ಆಗಲಿದೆ. ಹಾಲನ್ನು ಹೋಮ್ ಡೆಲಿವೆರಿ ಮಾಡಲು ಅವಕಾಶ ನೀಡಲಾಗಿದೆ.

ಆಸ್ಪತ್ರೆ, ಮೆಡಿಕಲ್ ಶಾಪ್ ಎಂದಿನಂತೆ ತೆರೆಯಲಿದೆ. ತುರ್ತು ವೈದ್ಯಕೀಯ ಸೇವೆಗಳ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಉಳಿದಂತೆ ಎಲ್ಲ ಚಟುವಟಿಕೆಗಳು ಸಂಪೂರ್ಣ ಬಂದ್ ಆಗಲಿವೆ.

ಪೂರ್ತಿ ಲಾಕ್ ಡೌನ್ ಘೋಷಣೆ ಆಗಿರುವ ಪಂಚಾಯತ್ ಗಳ ವಿವರ ಹೀಗಿದೆ:
ಶಿರೂರು, ಜಡ್ಕಲ್, ಕಂಬದಕೋಣೆ, ನಾಡ, ಕಾವ್ರಾಡಿ, ಹೊಂಬಾಡಿ – ಮಂಡಾಡಿ, ಕೋಟೇಶ್ವರ, ಹಾಲಾಡಿ, ಇಡೂರು- ಕುಂಜ್ಞಾಡಿ, ಆಜ್ರಿ, ಆಲೂರು, 38 ಕಳತ್ತೂರು, 80 ಬಡಗಬೆಟ್ಟು, ಅಲೆವೂರು, ಪೆರ್ಡೂರು, ತೆಂಕನಿಡಿಯೂರು, ಬೊಮ್ಮರಬೆಟ್ಟು, ಬೆಳಪು, ಬೆಳ್ಳೆ, ಪಡುಬಿದ್ರಿ, ಶಿರ್ವ, ಮಾಳ, ಈದು, ಕುಕ್ಕುಂದೂರು, ಕಡ್ತಲ, ಮರ್ಣೆ, ಪಳ್ಳಿ, ನಿಟ್ಟೆ, ಮಿಯಾರು, ಬೆಳ್ಮಣ್, ಬೆಳ್ವೆ, ಮುದ್ರಾಡಿ ಹಾಗೂ ವರಂಗ ಗ್ರಾಪಂಗಳು ಐದು ದಿನ ಸಂಪೂರ್ಣ ಲಾಕ್ ಡೌನ್ ಆಗಲಿವೆ.