ಉಡುಪಿ: ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಲಯನ್ಸ್ ಕ್ಲಬ್ ಹಿರಿಯಡ್ಕದ ವತಿಯಿಂದ ಲಯನ್ಸ್ ಅಧ್ಯಕ್ಷರಾದ ರಘುವೀರ್ ಶೆಟ್ಟಿಗಾರ್ ರವರ ನೇತೃತ್ವದಲ್ಲಿ ಪಾಂಗಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ಅತ್ರಾಡಿಯಲ್ಲಿ ನಿವೃತ್ತ ಜೀವನ ನಡೆಸುತ್ತಿರುವ ಶ್ರೀಮತಿ ನಳಿನಿ ಶೆಟ್ಟಿ ಮತ್ತು ಮೋಹನ್ ದಾಸ್ ಹೆಗ್ಡೆ ದಂಪತಿಯರನ್ನು ಶಾಲು ಹೊದಿಸಿ, ಹಾರ ಹಾಕಿ, ಫಲ ಪುಷ್ಪ ಮತ್ತು ಸ್ಮರಣಿಕೆ ಯನ್ನು ನೀಡಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಲಯನ್ಸ್ ಹಿರಿಯಡ್ಕದ ಕಾರ್ಯದರ್ಶಿ ಅನುಷಾ ಆಚಾರ್ಯ, ಸದಸ್ಯರಾದ ಹರೀಶ್ ಹೆಗ್ಡೆ, ರವೀಂದ್ರ ನಾಥ್ ಹೆಗ್ಡೆ, ಬಾಲಕೃಷ್ಣ ಹೆಗ್ಡೆ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಸತ್ಯಾನಂದ ನಾಯಕ್ ಆತ್ರಾಡಿ, ಲಯನ್ಸ್ ಸಮೃದ್ಧಿ ಉಡುಪಿ ಯ ಸದಸ್ಯರಾದ ಅನುಷಾ ಹೆಗ್ಡೆ, ನವೀನ್ ಶೆಟ್ಟಿ ಮುಂತಾದವರು ಹಾಜರಿದ್ದರು.












