ಚೆಸ್ ಆಟ ಮಕ್ಕಳ ಬೌದ್ಧಿಕ ಮಟ್ಟ ಚುರುಕಾಗಿಸುತ್ತದೆ: ರಾಜಗೋಪಾಲ‌‌ ಶೆಣೈ

ಉಡುಪಿ: ಚೆಸ್‌ ಆಟ ಜೀವನದಲ್ಲಿ ಯಶಸ್ಸು ಗಳಿಸಲು ಬೇಕಾಗುವ ಏಕಾಗ್ರತೆ, ಸಮಯದ ನಿರ್ವಹಣೆ ಹಾಗೂ ತಂತ್ರಗಾರಿಕೆಯನ್ನು ಕಲಿಸಿಕೊಡುತ್ತದೆ. ಮಕ್ಕಳ ಬೌದ್ಧಿಕ ಮಟ್ಟವನ್ನು ಚುರುಕಾಗಿಸಲು ಚೆಸ್‌ ಸಹಕಾರಿಯಾಗಿದೆ ಎಂದು ಉಡುಪಿ ಜಿಲ್ಲಾ ಚೆಸ್‌ ಸಂಘದ ಅಧ್ಯಕ್ಷ ಡಾ. ಕೆ. ರಾಜಗೋಪಾಲ ಶೆಣೈ ಹೇಳಿದರು.
ಅವರು ಶನಿವಾರ ಕುಂಜಿಬೆಟ್ಟು ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ಆಯೋಜಿಸಿದ್ದ ಎರಡು ದಿನಗಳ ಅಂತರ ಕಾಲೇಜು ಚೆಸ್‌ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಒತ್ತಡ ನಿರ್ವಹಣೆಗೆ ಚೆಸ್‌ ಆಟ ಪೂರಕವಾಗಿದ್ದು, ಸಕ್ರಿಯವಾಗಿ ಇದರಲ್ಲಿ
ಪಾಲ್ಗೊಂಡಲ್ಲಿ ಮಾನಸಿಕ ಆರೋಗ್ಯವನ್ನು ಇನ್ನಷ್ಟು ಸದೃಢಗೊಳಿಸಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಪ್ರಕಾಶ ಕಣಿವೆ ಮಾತನಾಡಿ,
ಬದುಕಿನಲ್ಲಿ ಯಶಸ್ಸು ಗಳಿಸಲು ಚೆಸ್‌ ಸಹಕಾರಿ ಎಂದರು.
ಕರ್ನಾಟಕ ರಾಜ್ಯ ಕಾನೂನು ವಿಶ್ವ ವಿದ್ಯಾಲಯದ ದೈಹಿಕ ನಿರ್ದೇಶಕರುಗಳ ಸಂಘದ ಅಧ್ಯಕ್ಷ ಕೃಷ್ಣೇಗೌಡ ಹಾಗೂ ಅಂತರಾಷ್ಟ್ರೀಯ ಚೆಸ್‌ ತೀರ್ಪುಗಾರ ವಸಂತ ಕುಮಾರ ಮಾತನಾಡಿದರು.
ವಿದ್ಯಾರ್ಥಿ ಕ್ಷೇಮಾಧಿಕಾರಿ ಸಿಸಿಲಿಯಾ ಡಿಸೋಜಾ ಉಪಸ್ಥಿತರಿದ್ದರು. ವಿದ್ಯಾರ್ಥಿ
ಡೇರಿಲ್‌ ಡಿಸೋಜಾ ಸ್ವಾಗತಿಸಿ, ದೃಶ್ಯ ವಂದಿಸಿದರು. ಆಲ್‌ಡ್ರಿನ್‌ ಪೌಲ್‌
ಕಾರ್ಯಕ್ರಮ ನಿರೂಪಿಸಿದರು.