ಉಡುಪಿ: ಕರಾವಳಿ ಕರ್ನಾಟಕದ ಅತಿದೊಡ್ಡ ಉತ್ಸವ ‘ಕೊಡಿ ಹಬ್ಬ’ ಎಂದೇ ಖ್ಯಾತಿ ಪಡೆದಿರುವ ಕೋಟೇಶ್ವರ ಕೋಟಿಲಿಂಗೇಶ್ವರ ದೇವರ ಮನ್ಮಹಾರಥೋತ್ಸವವು ಸಡಗರ ಸಂಭ್ರಮದಿಂದ ಜರುಗಿತು.
ಕೋಟಿಲಿಂಗೇಶ್ವರನಿಗೆ ಧಾರ್ಮಿಕ ವಿಧಿ ವಿಧಾನಗಳು ಜರುಗಿದ ನಂತರ ಸಾವಿರಾರು ಭಕ್ತರ ಉತ್ಸಾಹದ ಘೋಷಗಳೊಂದಿಗೆ ರಥೋತ್ಸವವು ಜರುಗಿತು. ಗರುಡ ದರ್ಶನ ಆಗುತ್ತಿದ್ದಂತೆ ಭಕ್ತರ ಘೋಷವಾಕ್ಯಗಳು ಮುಗಿಲುಮುಟ್ಟಿದ್ದವು. ಈ ಮಹಾ ರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಪುನೀತರಾದರು.
ಕೊಡಿ ಹಬ್ಬದ ಇನ್ನೊಂದು ವಿಶೇಷ ನವ ವಧು ವರರು ಹಬ್ಬಕ್ಕೆ ಬಂದು ಕಬ್ಬನ್ನು ತೆಗೆದು ಕೊಂಡು ದೇವರ ದರ್ಶನ ಮಾಡುವುದು. ಇದರಿಂದ ನವ ದಂಪತಿಗಳ ಬಾಳಿನಲ್ಲಿ ಕೊಡಿ ಅರಳುತ್ತದೆ ಅನ್ನುವುದು ನಂಬಿಕೆ.

















