ಉಡುಪಿ: ಶ್ರೀಕೃಷ್ಣಾಪುರ ಪರ್ಯಾಯಕ್ಕೆ ಕುಂಜಾರುಗಿರಿಯ ಗಿರಿಬಳಗ ಮತ್ತು ಗಿರಿಭಗಿನಿಯರ ವತಿಯಿಂದ ಭಾನುವಾರ ಹೊರಕಾಣಿಕೆ ಸಮರ್ಪಿಸಲಾಯಿತು.800 ಕಿಲೋ ಅಕ್ಕಿ, 650 ತೆಂಗಿನ ಕಾಯಿ,35 ಕಿಲೋ ಬೆಲ್ಲ, 25 ಕಿಲೋ ಸಕ್ಕರೆಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಗಿರಿಬಳಗದ ಅಧ್ಯಕ್ಷರಾದ ಪುಂಡರೀಕಾಕ್ಷ ಭಟ್, ಕಾರ್ಯದರ್ಶಿ ಶ್ರೀಶ ಕಾರಂತ, ಹಿರಿಯರಾದ ರಾಜಮೂರ್ತಿ ಭಟ್,ಪುಂಡರೀಕಾಕ್ಷ ಆಚಾರ್ಯ,ಬಳಗದ ಸದಸ್ಯರು,ಪರ್ಯಾಯೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ವಿಷ್ಣು ಪ್ರಸಾದ್ ಪಾಡಿಗಾರ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.