ಉಡುಪಿ: ಶ್ರೀ ಕೃಷ್ಣ ಮಠ,ರಾಜಾಂಗಣದ ಶ್ರೀನರಹರಿತೀರ್ಥ ವೇದಿಕೆಯಲ್ಲಿ,ಪರ್ಯಾಯ ಶ್ರೀಅದಮಾರು ಮಠ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಸರಕಾರದ ಸಹಾರದೊಂದಿಗೆ ನಡೆಯುವ ಶ್ರೀಕೃಷ್ಣ ಪ್ರಸಾದ -ಚಿಣ್ಣರ ಸಂತರ್ಪಣೆಯನ್ನು ಪರ್ಯಾಯ ಶ್ರೀಅದಮಾರು ಮಠದ ಹಿರಿಯ ಮಠಾಧೀಶರಾದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು ಹಾಗೂ ಕಿರಿಯ ಮಠಾಧೀಶರಾದ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಉದ್ಘಾಟಿಸಿ ಅನುಗ್ರಹ ಸಂದೇಶ ನೀಡಿದರು.
ಸಭೆಯಲ್ಲಿ ಉಡುಪಿ ಶಾಸಕರಾದ ಕೆ.ರಘುಪತಿ ಭಟ್,ಡಾ.ಜಿ.ಶಂಕರ್,ಯಶಪಾಲ್ ಸುವರ್ಣ,ಡಾ.ಎಂ.ಹರಿಶ್ಚಂದ್ರ,ರಮೇಶ್ ಎ.ಬಂಗೇರ,ಪ್ರಕಾಶ್ಚಂದ್ರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.ಗೋವಿಂದರಾಜ್ ರವರು ಸ್ವಾಗತಿಸಿ ಸಂತೋಷ್ ರವರು ಧನ್ಯವಾದ ಸಮರ್ಪಿಸಿದರು.ವಿಜಯಸಿಂಹಾಚಾರ್ಯರು ಕಾರ್ಯಕ್ರಮ ನಿರೂಪಿಸಿದರು.