ಶೀರೂರು ವೇದವರ್ಧನತೀರ್ಥರಿಂದ ಮೊದಲ ಪೂಜೆ

ಉಡುಪಿ: ಪರ್ಯಾಯ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಮೊದಲ ಮಹಾಪೂಜೆ ನಡೆಸಿದರು.ಶ್ರೀಕೃಷ್ಣನನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು.ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರ ಪ್ರಥಮ ಪರ್ಯಾಯದ ಮೊದಲ ದಿನವಾದ ಭಾನುವಾರ ಸುಮಾರು 80 ಸಾವಿರ ಮಂದಿ ಅನ್ನಪ್ರಸಾದ ಭೋಜನ ಸ್ವೀಕರಿಸಿದರು.

ಮಹಾಪೂಜೆ ಬಳಿಕ ಪಲ್ಲಪೂಜೆ ನಡೆದು ಅನ್ನಸಂತರ್ಪಣೆ ನಡೆಯಿತು. ರಾಜಾಂಗಣ, ಭೋಜನಶಾಲೆ, ಹೊರೆಕಾಣಿಕೆ ಪೆಂಡಾಲ್‌ ಸಹಿತ ವಿವಿಧೆಡೆಗಳಲ್ಲಿ ಭೋಜನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.