ಉಡುಪಿ:ಗೋಪಾಲಕೃಷ್ಣ ಮಂದಿರ, ಮುಂಡ್ಕಿನಜೆಡ್ಡು ಇಲ್ಲಿ ದಿನಾಂಕ 14-09-2025ರ ಆದಿತ್ಯವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ರಾತ್ರಿ 7.30ರಿಂದ ಭಜನೆ ನಂತರ ವಿಶೇಷ ಪೂಜೆ ಜರಗಲಿದೆ.
ದಿನಾಂಕ 15-09-2025 ರ ಸೋಮವಾರ ವಿಟ್ಲಪಿಂಡಿ ಪ್ರಯುಕ್ತ ಅಪರಾಹ್ನ ಗಂಟೆ 3.00ರಿಂದ ವಿವಿಧ ಆಕರ್ಷಕ ಸ್ಪರ್ಧೆಗಳು ಜರಗಲಿವೆ.
ರಸಪ್ರಶ್ನೆ,ಸಂಗೀತ ಕುರ್ಚಿ,ಇಡ್ಲಿ ತಿನ್ನುವುದು, ಚಮಚ ಲಿಂಬೆ ಓಟ, ಗೊಂಬೆಗೆ ತಿಲಕ ಹಚ್ಚುವುದು, ಆನೆಗೆ ಬಾಲ ಬಿಡಿಸುವುದು, ಪುಲ್ ಅಪ್, ಹಗ್ಗ ಜಗ್ಗಾಟ, ಮೊಸರು ಕುಡಿಕೆ ಒಡೆಯುವುದು ಇತ್ಯಾದಿ ಸ್ಪರ್ಧೆಗಳು ವಿವಿಧ ವಿಭಾಗಗಳಲ್ಲಿ ಜರಗಲಿವೆ. ಅಲ್ಲದೆ ಮುದ್ದುಕೃಷ್ಣ , ಲಕ್ಕಿ ಪರ್ಸನ್, ಪ್ರತಿಭಾ ಪುರಸ್ಕಾರ, ಬಹುಮಾನ ವಿತರಣೆ ಇತ್ಯಾದಿ ಕಾರ್ಯಕ್ರಮಗಳು ಜರಗಲಿವೆ.












