ಉಡುಪಿ: ಡಿಕೆಶಿ ಬಂಧನದ ವಿರುದ್ದ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಅವರ ಪ್ರತಿಕೃತಿಯನ್ನು ಸುಡುವುದು ಖಂಡನೀಯ. ಡಿಕೆಶಿ ಏನು ಸ್ವಾತಂತ್ರ್ಯ ಹೋರಾಟಗಾರನಾ? ಹೀಗೆ ಮುಂದುವರಿದರೆ ಬಿಜೆಪಿಗೂ ಪ್ರತಿಭಟನೆಯ ದಾರಿ ತಿಳಿದಿದೆ ಎಂದು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಎಚ್ಚರಿಕೆ ನೀಡಿದ್ದಾರೆ.
ಗುರುವಾರ ಉಡುಪಿಯಲ್ಲಿ ಮಾಧ್ಯಮಗಳ ಜತೆಗೆ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟಕ್ಕಾಗಿ ಇಲ್ಲಿ ಯಾರೂ ಜೈಲಿನಲ್ಲಿಲ್ಲ.”ಇಡಿ ವಿರುದ್ಧ ಏನಾದರೂ ಇದ್ದರೆ ಅವರು ಸುಪ್ರೀಂ ಕೋರ್ಟ್‌ಗೆ ಹೋಗಬಹುದು. ಆದರೆ ಪ್ರತಿಭಟನೆ ಹೆಸರಿನಲ್ಲಿ ಪ್ರಧಾನಿ ಮತ್ತು ಗೃಹ ಸಚಿವರನ್ನು ನಿಂದನೀಯ ಮಾತುಗಳಲ್ಲಿ ಅವಮಾನಿಸುದು ಸರಿಯಲ್ಲ. ಹೀಗಾಗಿ ಪ್ರಧಾನಿ ಮತ್ತು ಗೃಹ ಸಚಿವರು, ಬಿಜೆಪಿಯನ್ನು ನಿಂದಿಸುವುದನ್ನು ಮುಂದುವರಿಸಿದರೆ ಸಹಿಸಲಾಗುವುದಿಲ್ಲ. ಬಂಧನ ವಿಷಯ ನೋಡಿಕೊಳ್ಳಲು ಕಾನೂನು ಮತ್ತು ಸುಪ್ರೀಂ ಕೋರ್ಟ್ ಇದೆ. ಹೀಗೆ ಮುಂದುವರಿಸಿದರೆ ಅವರ ವಿರುದ್ಧ ಪ್ರತಿಭಟಿಸುವ ಮಾರ್ಗವೂ ಬಿಜೆಪಿಗೆ ತಿಳಿದಿದೆ ಎಂದು ತಿಳಿಸಿದ್ದಾರೆ.












