ಕೊಲ್ಲೂರು: ಮಿನಿ ಗೂಡ್ಸ್ ವಾಹನವೊಂದು ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು ಇಬ್ಬರು ಗಾಯಗೊಂಡ ಘಟನೆ ಇಡೂರು ಕುಂಜಾಡಿ ಗ್ರಾಮದ ಜನ್ನಲ್ ಎಂಬಲ್ಲಿ ಮೇ 19ರಂದು ನಡೆದಿದೆ.
ಮೃತರನ್ನು ಕಾರು ಚಾಲಕ ಜೋಸ್ ಪಿಟಿ ರಿನ್ಸೋ ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ತ್ರೇಸಿಯಮ್ಮ ಶಾಂತಿ ಎಂಬವರು ಮಣಿಪಾಲ ಆಸ್ಪತ್ರೆ ಹಾಗೂ ಶಬರೀಶ ಎಂಬವರು ಕುಂದಾಪುರ ಆಸ್ಪತ್ರೆಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೊಲ್ಲೂರು ಕಡೆಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಗೂಡ್ಸ್ ವಾಹನ ಎದುರಿನಿಂದ ಬರುತ್ತಿದ್ದ ಕಾರಿಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಕಾರಿನಲ್ಲಿ ಮೂವರು ಗಾಯಗೊಂಡಿದ್ದು, ಇವರ ಪೈಕಿ ಗಂಭೀರ ವಾಗಿ ಗಾಯ ಗೊಂಡ ಜೋಸ್ ಪಿಟಿ ರಿನ್ಸೋ ಕುಂದಾಪುರ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರೆಂದು ತಿಳಿದುಬಂದಿದೆ.
ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












