ಉಡುಪಿ: ಮೇ 3 ಶನಿವಾರ ದಂದು ನಡೆಯುವ ಜುಮಾದಿ ಕೋಲಕ್ಕೆ ಬೇಕಾದ ಎಲ್ಲಾ ಅನುಮತಿಯನ್ನು ಪಡೆದಿದ್ದು, ಕೊಡವೂರು ಜುಮಾದಿ ಕೊಲವು ನಿಗದಿಯಂತೆ ಖಾಸಗಿ ಪಟ್ಟೆ ಜಾಗದಲ್ಲಿ ವಿಜೃಂಭಣೆಯಿಂದ ನಡೆಯಲಿದೆ.
ಮಾನ್ಯ ಜಿಲ್ಲಾಧಿಕಾರಿಯವರ ಆದೇಶ 67 ಸೆನ್ಸ್ ಸರಕಾರಿ ಜಾಗಕ್ಕೆ ಮಾತ್ರ ನಿಷೇಧಾಜ್ಞೆಯನ್ನು ಜಾರಿಗೊಳಿಸಿರುತ್ತಾರೆ.
ಕೊಡವೂರ್ದ ಕೋಲವು ಖಾಸಗಿ ಪಟ್ಟೆ ಜಾಗದಲ್ಲಿರುವುದರಿಂದ ಮಾನ್ಯ ಜಿಲ್ಲಾಧಿಕಾರಿಯವರ ಆದೇಶವು ಕೊಡವೂರ್ದ ಜುಮಾದಿ ಕೋಲ ನಡೆಯುವ ಸ್ಥಳದ ಮೇಲೆ ಅನ್ವಹಿಸುವುದಿಲ್ಲ.

ಆದೇಶವು ದೈವಸ್ಥಾನ ವಿರುವ ಜಾಗಕ್ಕೆ 8 ಜನ ಹೋಗಲು ಅವಕಾಶ ಕೊಟ್ಟಿದ್ದು ಆದೇಶ ಪಾಲೆನೆಯೊಂದಿಗೆ ಆಡಳಿತ ಮಂಡಳಿಯು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಂಪೂರ್ಣ ಸಹಕಾರವು ಈ ಹಿಂದೆಯೂ ನೀಡಿದ್ದು ಇನ್ನು ಮುಂದೆಯೂ ನೀಡಲಿದೆ ಎಂದು ಶ್ರೀ ಪಂಚ ದೂಮಾವತಿ ದೈವಸ್ಥಾನ(ರಿ) ಜುಮಾದಿ ನಗರ ಕೊಡವೂರು ಇದರ ಆಡಳಿತ ಮಂಡಳಿ ತಿಳಿಸಿದೆ












