ಉಡುಪಿ: ಕೆಮ್ಮಾಲೆ ಗ್ರೂಪ್ನ ಉದ್ಯಮಿ ರಾಘವೇಂದ್ರ ಕುಂದರ್ (48) ಜುಲೈ 10ರಂದು ನಿಧನ ಹೊಂದಿದರು. ಅವರು ಕೆಲಸದ ಸ್ಥಳದಲ್ಲಿ ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದರು. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಬಹು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಅವರು, ಉದ್ಯಮಿಯಾಗಿ ಸಾಕಷ್ಟು ಹೆಸರುವಾಸಿಯಾಗಿದ್ದರು. ಕೆಮ್ಮಾಲೆ ಗ್ರೂಪ್ ಬೇಕ್ ಸ್ಟುಡಿಯೋ, ಫಿಶ್ ಫ್ಯಾಕ್ಟರಿ (ಸೀಫುಡ್ ರೆಸ್ಟೋರೆಂಟ್) ಮತ್ತು ಕೆಮ್ಮಾಲೆ ಕನ್ಸ್ಟ್ರಕ್ಷನ್ಸ್ ಅಡಿಯಲ್ಲಿ ನಿರ್ಮಾಣ ಕ್ಷೇತ್ರದಲ್ಲಿನ ತನ್ನ ಜನಪ್ರಿಯ ಬ್ರ್ಯಾಂಡ್ಗಳಿಗೆ ಹೆಸರುವಾಸಿಯಾಗಿದೆ.ಮೃತರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.












