ಉಡುಪಿ:ವಿಜ್ಞಾನ ವಿದ್ಯಾರ್ಥಿಗಳಿಗೆ ಕೆಸಿಇಟಿ/ನೀಟ್/ಜೆಇಇ ಮಾಹಿತಿ ಕಾರ್ಯಗಾರ.

ಕಟಪಾಡಿ: ತ್ರಿಶಾ ವಿದ್ಯಾ ಪಿ ಯು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಆಗಸ್ಟ್ 23 ರಂದು ಕೆಸಿಇಟಿ/ನೀಟ್/ಜೆಇಇ ಮಾಹಿತಿ ಕಾರ್ಯಗಾರವು ತ್ರಿಶಾ ವಿದ್ಯಾ ಪಿಯು ಕಾಲೇಜಿನ ಕವಿರತ್ನ ಕಾಳಿದಾಸ ಸಭಾಂಗಣದಲ್ಲಿ ನಡೆಯಿತು.

ಅಧ್ಯಕ್ಷತೆ ವಹಿಸಿದ ತ್ರಿಶಾ ಸಂಸ್ಥೆಯ ಅಧ್ಯಕ್ಷರು ಸಿ ಎ ಗೋಪಾಲಕೃಷ್ಣ ಭಟ್ ಅವರು ಕಾರ್ಯಕ್ರಮ ಉದ್ಘಾಟಿಸಿ ಸತತ ಪರಿಶ್ರಮ ಮಾತ್ರ ನಮ್ಮನ್ನು ಗುರಿಯ ಕಡೆಗೆ ಕೊಂಡುಯ್ಯುತ್ತವೆ ಎಂದರು ಹಾಗು ಅತಿಥಿಯಾಗಿ ಆಗಮಿಸಿದ ಡಾ ಸಿ.ಕೆ ಮಂಜುನಾಥರವರು ಸ್ಪರ್ಧಾತ್ಮಕ ಯುಗದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯು ವಿದ್ಯಾರ್ಥಿಗೆ ಎಷ್ಟು ಮುಖ್ಯ ಹಾಗೂ ಅದರ ತಯಾರಿಯನ್ನು ಮಾಡುವ ಬಗೆಯನ್ನು ವಿವರಿಸಿದರು.

ಈ ಕಾರ್ಯಕ್ರಮದಲ್ಲಿ ಸಿದ್ಧಾಂತ್ ಪೌಂಡೇಶನ್ ಟ್ರಸ್ಟಿ ರಾಮ್ ಪ್ರಭು, ತ್ರಿಶಾ ವಿದ್ಯಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಪ್ರೊ. ಹರಿಪ್ರಸಾದ್ ಹಾಗು ತ್ರಿಶಾ ಕ್ಲಾಸಸ್‌ನ ಸೆಂಟರ್ ಹೆಡ್ ಡಾ. ವರದರಾಜ್ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಗಣಿತಶಾಸ್ತ್ರ ಉಪನ್ಯಾಸಕಿ ಶ್ರೀಮತಿ ವಿನಿತಾರವರು ಸ್ವಾಗತಿಸಿ ಭೌತಶಾಸ್ತ್ರ, ಉಪನ್ಯಾಸಕಿ ಶ್ರೀಮತಿ ಆಶಾರವರು ಅತಿಥಿಯನ್ನು ಪರಿಚಯಿಸಿದರು. ಹಾಗು ಜೀವಶಾಸ್ತ್ರ ಉಪನ್ಯಾಸಕರಾದ ಸಂಧ್ಯಾರವರು ನಿರೂಪಿಸಿ ವಂದಿಸಿದರು.