ಉಡುಪಿ: ನಾಳೆಯ (ಜೂನ್ 21) ಕೋವಿಡ್ ಲಸಿಕೆ ವಿವರ

ಉಡುಪಿ: ಜಿಲ್ಲೆಯಲ್ಲಿ ನಾಳೆ (ಜೂನ್ 21) ಕೋವಿಡ್-19 ಲಸಿಕಾ ಮಹಾಮೇಳ ನಡೆಯಲಿದೆ.

ಮಹಾಮೇಳದಲ್ಲಿ ರಾಜ್ಯ ಸರಕಾರ ಗುರುತಿಸಿರುವ ಅನುಬಂಧ-1 ರಲ್ಲಿರುವ ಕೊರೋನ ಮುಂಚೂಣಿ ಕಾರ್ಯಕರ್ತರು/ದುರ್ಬಲ ಗುಂಪಿನ ಫಲಾನುಭವಿಗಳಿಗೆ/ಆದ್ಯತಾಗುಂಪಿನವರಿಗೆ ಮತ್ತು ಆರೋಗ್ಯ ಕಾರ್ಯಕರ್ತರುಗಳಿಗೆ/ಕೇಂದ್ರ ಸರಕಾರ ಗುರುತಿಸಿರುವ ಮುಂಚೂಣಿ ಕಾರ್ಯಕರ್ತರುಗಳಿಗೆ ಹಾಗೂ 45 ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ ಪ್ರಥಮ ಡೋಸ್ ಮತ್ತು 2ನೇ ಡೋಸ್ ಲಸಿಕೆಯನ್ನು ನೀಡಲಾಗುವುದು. ಒಟ್ಟು 21,000 ಕೋವಿಡ್-19 ಲಸಿಕೆಯನ್ನು ನೀಡುವ ಗುರಿಯನ್ನು ಹೊಂದಲಾಗಿದೆ.

ಜಿಲ್ಲಾ ಮಟ್ಟದ ಕೋವಿಡ್-19 ಲಸಿಕಾಕರಣದ ಮಹಾ ಮೇಳದ ಉದ್ಘಾಟನೆಯು ಹನುಮಂತನಗರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಿಗ್ಗೆ 10.30ಕ್ಕೆ ಜರುಗಲಿದೆ.

ಉಡುಪಿ ನಗರ ಪ್ರದೇಶದ ಈ ಕೆಳಗಿನ ಆಸ್ಪತ್ರೆಗಳಲ್ಲಿ ಕೋವಿಡ್-19 ಲಸಿಕಾ ಮಹಾಮೇಳ ಜರುಗಲಿದೆ.
1. ಜಿಲ್ಲಾ ಆಸ್ಪತ್ರೆ ಅಜ್ಜರಕಾಡು ಉಡುಪಿ (ಸೇಂಟ್ ಸಿಸಿಲಿ ಶಾಲೆ)
(ಸಮಯ: ಬೆಳಿಗ್ಗೆ 9.30 ರಿಂದ 4.30 ರ ವರೆಗೆ)
1)ಕೋವಿಶೀಲ್ಡ್ -(150 ಡೋಸ್ ಲಭ್ಯ)
2)ಕೋವ್ಯಾಕ್ಸಿನ್ -(100 ಡೋಸ್ ಲಭ್ಯ)

2. ದೊಡ್ಡಣಗುಡ್ಡೆ ಜನತಾ ವ್ಯಾಯಾಮ ಶಾಲೆ
(ಸಮಯ: ಬೆಳಿಗ್ಗೆ 10.00 ರಿಂದ 4.30 ರ ವರೆಗೆ)

ಕೋವಿಶೀಲ್ಡ್ -(550 ಡೋಸ್ ಲಭ್ಯ)

3. ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಮಣಿಪಾಲ (ಮಾಧವ ಕೃಪಾ ಶಾಲೆ, ಮಣಿಪಾಲ)
(ಸಮಯ: ಬೆಳಿಗ್ಗೆ 9.30 ರಿಂದ 4.30 ರ ವರೆಗೆ)
1)ಕೋವಿಶೀಲ್ಡ್ – (300 ಡೋಸ್ ಲಭ್ಯ)
2)ಕೋವ್ಯಾಕ್ಸಿನ್ -(450 ಡೋಸ್ ಲಭ್ಯ)

 

4. ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಉಡುಪಿ (ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಹನುಮಂತನಗರ ದಲ್ಲಿ)(ಸಮಯ: ಬೆಳಿಗ್ಗೆ 9.30 ರಿಂದ 4.30 ರ ವರೆಗೆ)

ಕೋವಿಶೀಲ್ಡ್ – (300 ಡೋಸ್ ಲಭ್ಯ)

 

5. ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಉಡುಪಿ (ಖಾಸಗಿ ಪ್ರಾಥಮಿಕ ಶಾಲೆ ಆದಿಉಡುಪಿಯಲ್ಲಿ)
(ಸಮಯ: ಬೆಳಿಗ್ಗೆ 9.30 ರಿಂದ 4.30 ರ ವರೆಗೆ)

ಕೋವ್ಯಾಕ್ಸಿನ್ -(200 ಡೋಸ್ ಲಭ್ಯ)

6. ಎಫ್.ಪಿ.ಎ.ಐ ಕುಕ್ಕಿಕಟ್ಟೆಯಲ್ಲಿ (ಇಂದಿರಾನಗರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಇಂದಿರಾನಗರ)
(ಸಮಯ: ಬೆಳಿಗ್ಗೆ 9.30 ರಿಂದ 4.30 ರ ವರೆಗೆ)
1)ಕೋವಿಶೀಲ್ಡ್ – (150 ಡೋಸ್ ಲಭ್ಯ)
2)ಕೋವ್ಯಾಕ್ಸಿನ್ (30 ಡೋಸ್ ಲಭ್ಯ)

 

7.ಸರಕಾರಿ ತಾಯಿ ಮತ್ತು ಮಕ್ಕಳ (ಬಿ.ಆರ್.ಎಸ್) ಆಸ್ಪತ್ರೆ, ಉಡುಪಿ
(ಸಮಯ: ಬೆಳಿಗ್ಗೆ 9.30 ರಿಂದ 4.30 ರ ವರೆಗೆ)
1)ಕೋವಿಶೀಲ್ಡ್- (350 ಡೋಸ್ ಲಭ್ಯ)

2) 25/06/2021 ರ ಒಳಗೆವಿದೇಶ ಪ್ರಯಾಣ ಮಾಡುವವರಲ್ಲಿ ಕೋವಿಶೀಲ್ಡ್ ಮೊದಲ ಡೋಸ್ ಲಸಿಕೆ ಪಡೆದು 28 ದಿನಗಳು ಮೀರಿದವರಿಗೆ 2ನೇ ಡೋಸ್ ಕೋವಿಶೀಲ್ಡ್ ಲಸಿಕೆ (100 ಡೋಸ್ ಲಭ್ಯ.

ಗ್ರಾಮೀಣ ಪ್ರದೇಶದಲ್ಲಿ ರಾಜ್ಯ ಸರಕಾರ ಗುರುತಿಸಿರುವ ಅನುಬಂಧ-1 ರಲ್ಲಿರುವ ಕೊರೋನ ಮುಂಚೂಣಿ ಕಾರ್ಯಕರ್ತರು/ದುರ್ಬಲ ಗುಂಪಿನ ಫಲಾನುಭವಿಗಳು/ಆದ್ಯತಾಗುಂಪಿನವರು ಮತ್ತು ಆರೋಗ್ಯ ಕಾರ್ಯಕರ್ತರು/ಕೇಂದ್ರ ಸರಕಾರ ಗುರುತಿಸಿರುವ ಮುಂಚೂಣಿ ಕಾರ್ಯಕರ್ತರು ಹಾಗೂ 45 ವರ್ಷ ಮೇಲ್ಪಟ್ಟ ಸಾರ್ವಜನಿಕರು ಕೋವಿಡ್-19 ಪ್ರಥಮ ಡೋಸ್ ಮತ್ತು 2ನೇ ಡೋಸ್ ಲಸಿಕೆಯನ್ನು ಪಡೆಯಲು ಹತ್ತಿರದ ಸರಕಾರಿ ಆಸ್ಪತ್ರೆ/ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಿ ಲಸಿಕ ಶಿಬಿರದ ಸ್ಥಳವನ್ನು ಖಚಿತಪಡಿಸಿಕೊಂಡು 21.06.2021 ರಂದು ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆ ಪಡೆಯುವುದು.

18ರಿಂದ 44 ವರ್ಷದವರಿಗೆ ಲಸಿಕೆ ಇಲ್ಲ:
ಜಿಲ್ಲೆಯಲ್ಲಿ 18 ರಿಂದ 44 ವರ್ಷ ವಯೋಮಿತಿಯ ಸಾರ್ವಜನಿಕರಿಗೆ ಯಾವುದೇ ಕೋವಿಡ್-19 ಲಸಿಕೆ ಲಭ್ಯವಿರುವುದಿಲ್ಲ ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.