ಹಿರಿಯ ನಾಗರಿಕರ ಮನೆ ಬಾಗಿಲಿಗೆ ಬರಲಿದೆ ಅಗತ್ಯ ಸಾಮಗ್ರಿ: ಉಡುಪಿ ಜಿಲ್ಲಾಡಳಿತದಿಂದ ವಿಶೇಷ ಸೇವೆ, ಕಾಲ್ ಮಾಡಿ ಸೇವೆ ಪಡೀರಿ

ಉಡುಪಿ : ಕೋವಿಡ್ -2019 ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯ ವ್ಯಾಪ್ತಿಯಲ್ಲಿ ಸಿಆರ್‌ಪಿಸಿ ಸೆಕ್ಷನ್ 144(3) ರಂತೆ ನಾಗರೀಕರ ಸಂಚಾರವನ್ನು ನಿರ್ಬಂಧಿಸಿ ಆದೇಶವನ್ನು ಹೊರಡಿಸಲಾಗಿದೆ.

ಅದರಂತೆ ಜನರು ಹೊರಗಡೆ ಸಂಚಾರಿಸುವುದನ್ನು ನಿರ್ಬಂಧಿಸಿರುವ ಹಿನ್ನಲೆಯಲ್ಲಿ ಉಡುಪಿ ಜಿಲ್ಲೆಯ ನಗರ ಪ್ರದೇಶಗಳಾದ ಉಡುಪಿ ನಗರಸಭೆ, ಕುಂದಾಪುರ, ಕಾಪು ಹಾಗೂ ಕಾರ್ಕಳ  ಪುರಸಭೆಗಳು ಮತ್ತು ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ  ವಾಸವಿರುವ  ನಾಗರಿಕರ  ಪೈಕಿ  60 ವರ್ಷ ಮೇಲ್ಪಟ್ಟ  ಹಿರಿಯ ನಾಗರಿಕರ ಕುಟುಂಬಗಳಿಗೆ  ( ಯಾವುದೇ ರೀತಿಯ 60 ವರ್ಷಕ್ಕಿಂತ ಕೆಳಗಿನ ಸಂಬಂಧಿಕರು ಅವರೊಂಧಿಗೆ ವಾಸ್ತವ್ಯವಿರದಿದ್ದಲ್ಲಿ ) ಅಗತ್ಯ ವಸ್ತುಗಳ ಮತ್ತು ಔಷದಿಗಳನ್ನ ಹೋಂ ಡೆಲಿವೆರಿ ಮಾಡುವ ಸಲುವಾಗಿ ಅವರಿಗೆ  ಒಂದು ವಾರದ ಮಟ್ಟಿಗೆ ತಮಗೆ ಅವಶ್ಯಕತೆ ಇರುವ ತರಕಾರಿ, ದಿನಸಿ, ಹಣ್ಣುಹಂಪಲು  ಔಷಧಿ ಮುಂತಾದ ಅಗತ್ಯ ವಸ್ತುಗಳನ್ನು ಪಟ್ಟಿ ಮಾಡಿ ಮನೆಯ ಸಂರ್ಪೂಣ ವಿಳಾಸನೊಂದಿಗೆ  ನಗರ ಸ್ಥಳೀಯ ಸಂಸ್ಥೆಯ ಅಧಿಕಾರಿಗಳನ್ನು  ದೂರವಾಣಿ ಮುಖಾಂತರ  ಸಂಪರ್ಕಿಸಿ ಅಗತ್ಯ ಸಾಮಾಗ್ರಿಗಳ ಪಟ್ಟಿಯನ್ನು ಹಾಗೂ ಮನೆಯ ವಿಳಾಸ ವಾಟ್ಸಪ್ ಲೊಕೇಶನ್ ಮೂಲಕ ಕಳಹಿಸಬಹುದಾಗಿದೆ.

ವಸ್ತುಗಳು ಮನೆಗೆ ತಲುಪಿಸಿದಾಗ ಅದಕ್ಕೆ ತಗಲುವ  ಮೌಲ್ಯವನ್ನು ಪಾವತಿಸುವಂತೆ ತಿಳಿಸಿ  ನಗರ ಪ್ರದೇಶಗಳಲ್ಲಿ  ವಾಸವಿರುವ  ಎಲ್ಲಾ  60 ವರ್ಷ ಮೇಲ್ಪಟ್ಟ  ಹಿರಿಯ ನಾಗರೀಕರು  ಜಿಲ್ಲಾಡಳಿತ ವತಿಯಿಂದ ವ್ಯವಸ್ಥೆಯನ್ನು ಮಾಡಲಾಗಿದೆ.

ಆದರೆ ಜಿಲ್ಲೆಯ 60 ವರ್ಷ ಮೇಲ್ಪಟ್ಟ  ಹಿರಿಯ ನಾಗರೀಕರು  ಈ ವ್ಯವಸ್ಥೆ  ಸದುಪಯೋಗಗಳನ್ನು ಕಡಿಮೆ ಸಂಖ್ಯೆಯಲ್ಲಿ ಪಡೆಯುತ್ತಿರುವುದು  ಗಮನಕ್ಕೆ ಬಂದಿರುತ್ತದೆ ಈ ವ್ಯವಸ್ಥೆಯನ್ನು ಜಿಲ್ಲಾಡಳಿತವು ಹಿರಿಯ ನಾಗರೀಕರ  ವಿಶೇಷ ಕಾಳಜಿಯನ್ನು ವಹಿಸುವ ಸಲುವಾಗಿ  ವಯೋ ನಾಗರಿಕರು ತಮ್ಮ ದೈನಂದಿನ ಉಪಯೋಗದ ಅಗತ್ಯ ವಸ್ತುಗಳನ್ನು ಮಾರುಕಟ್ಟೆಗೆ ಬಂದು ಕೊಂಡುಕೊಳ್ಳಲು ಕಷ್ಟಕರವಾಗಿರುವ ಕಾರಣಕ್ಕಾಗಿ ಮಾಡಿರುವ ಒಂದು ಉತ್ತಮ ರೀತಿಯ ವ್ಯವಸ್ಥೆಯಾಗಿರುತ್ತದೆ

ಉಡುಪಿ ನಗರ ಸಭೆ ವ್ಯಾಪ್ತಿಯ ನಿವಾಸಿಗಳು ಸಂಪರ್ಕಸಬೇಕಾದ ಅಧಿಕಾರಿಗಳ  ವಿವರ:

1       ಆನಂದ ಸಿ ಕಲ್ಲೋಳಿಕರ – ಪೌರಾಯುಕ್ತರು ನಗರ ಸಭೆ ಉಡುಪಿ  9740019211

2       ಮೋಹನರಾಜು -ಸಹಾಯಕ ಕಾರ್ಯನಿವಾಹಕ ಇಂಜಿನಿಯರ್ 9342594242

3       ಸ್ನೇಹಾ ಪರಿಸರ ಇಂಜಿನಿಯರ್ 9164397765

4       ಧನಂಜಯ -ಕಂದಾಯ ಅಧಿಕಾರಿ    8762083841

 

ಕುಂದಾಫುರ ಪುರ ಸಭೆ ವ್ಯಾಪ್ತಿಯ ನಿವಾಸಿಗಳು  ಸಂಪರ್ಕಸಬೇಕಾದ ಅಧಿಕಾರಿಗಳ  ವಿವರ:

ರಾಘವೇಂದ್ರ   ಪರಿಸರ ಇಂಜಿನಿಯರ್   9448507244

ಕಾರ್ಕಳ ಪುರ ಸಭೆ ವ್ಯಾಪ್ತಿಯ ನಿವಾಸಿಗಳು ಸಂಪರ್ಕಸಬೇಕಾದ ಅಧಿಕಾರಿಗಳ  ವಿವರ:

ರೇಖಾ ಶೆಟ್ಟಿ   ಮುಖ್ಯಾಧಿಕಾರಿಪುರ ಸಭೆ ಕಾರ್ಕಳ     9900948873

ಕಾಪು ಪುರಸಭೆ ವ್ಯಾಪ್ತಿ ನಿವಾಸಿಗಳು ಸಂಪರ್ಕಸಬೇಕಾದ ಅಧಿಕಾರಿಗಳ  ವಿವರ:

ರವಿಪ್ರಕಾಶ್   ಪರಿಸರ ಇಂಜಿನಿಯರ್        7624851225

ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿ ನಿವಾಸಿಗಳು ಸಂಪರ್ಕಸಬೇಕಾದ ಅಧಿಕಾರಿಗಳ  ವಿವರ:

ಅರುಣ್ ,ಮುಖ್ಯಾಧಿಕಾರಿ ಪಟ್ಟಣ ಪಂಚಾಯತ್ ಸಾಲಿಗ್ರಾಮ   9449943882

ಮಮತ ,ಆರೋಗ್ಯ ನಿರೀಕ್ಷಕರು 9035627273

ಇವರುಗಳನ್ನು ಸಂಪರ್ಕಿಸಿ, ನಗರ ಪ್ರದೇಶಗಳಲ್ಲಿ  ವಾಸವಿರುವ  ಎಲ್ಲಾ  60 ವರ್ಷ ಮೇಲ್ಪಟ್ಟ  ಹಿರಿಯ ನಾಗರೀಕರು  ಇದರ ಸದುಪಯೋಗವನ್ನು ಪಡೆಯುವಂತೆ , ತಮ್ಮ ದೈನಂದಿನ ಉಪಯೋಗದ ಅಗತ್ಯ ವಸ್ತುಗಳನ್ನು ಪಡೆಯುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.