ಉಡುಪಿ: ರಾಜ್ಯ ಸರ್ಕಾರವು ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ಹಾಗೂ ಕಾರ್ಮಿಕ ಕಾಯ್ದೆಗಳಿಗೆ ಸುಗ್ರೀವಾಜ್ಞೆ ಮೂಲಕ ತಂದಿರುವ ತಿದ್ದುಪಡಿಯನ್ನು ವಿರೋಧಿಸಿ ಉಡುಪಿ ಜಿಲ್ಲಾ ಜೆಡಿಎಸ್ ವತಿಯಿಂದ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ಹಾಗೂ ಕಾರ್ಮಿಕ ಕಾಯ್ದೆಗಳಿಗೆ ಸುಗ್ರೀವಾಜ್ಞೆ ರಾಜ್ಯ ಸರ್ಕಾರ ತಂದಿರುವ ತಿದ್ದುಪಡಿ ಜನರಿಗೆ ಮಾರಕವಾಗಲಿದೆ. ರೈತರು ತಮ್ಮ ಭೂಮಿಯ ಹಕ್ಕು ಕಳೆದುಕೊಂಡರೆ, ಕಾರ್ಮಿಕರು ತಮ್ಮ ಕಾರ್ಮಿಕ ಹಕ್ಕುಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಸರ್ಕಾರ ಈ ಕಾಯ್ದೆಗಳಿಗೆ ತಂದಿರುವ ತಿದ್ದುಪಡಿಯನ್ನು ಕೂಡಲೇ ಹಿಂಪಡೆಯಬೇಕು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ ಆಗ್ರಹಿಸಿದರು.
ಬಳಿಕ ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅವರ ಮೂಲಕ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಜೆಡಿಎಸ್ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಅಡಿಗ, ಜಯರಾಮ ಆಚಾರ್ಯ, ಜಯಕುಮಾರ್ ಪರ್ಕಳ, ಬಿ.ಟಿ. ಮಂಜುನಾಥ, ರಂಜಿತ್ ಬೈಂದೂರು, ಕಿಶೋರ್ ಕುಂದಾಪುರ, ರಾಜು ದೇವಾಡಿಗ, ಪ್ರಕಾಶ್ ಶೆಟ್ಟಿ ಬೆಳ್ಳಂಪಳ್ಳಿ, ರವಿರಾಜ್ ಸಾಲಿಯಾನ್, ಶ್ರೀಕಾಂತ್ ಹೆಬ್ರಿ, ಎಸ್.ಪಿ. ಬರ್ಬೋಜಾ, ಅಬ್ದುಲ್ ಹಮೀದ್ ಯೂಸೂಫ್, ರಮೇಶ್ ಕುಂದಾಪುರ, ಮಾರುತಿ ಮೊಗೇರ, ಶಂಶುದ್ದೀನ್ ಮಜೂರು, ವಾಲ್ಟರ್ ಬಾರ್ಕೂರು, ರಶೀದ್ ಯು.ಎ, ಪ್ರಶಾಂತ್ ಭಂಡಾರಿ, ಪ್ರಶಾಂತ್ ಸಾಲಿಯಾನ್, ಮಹಮ್ಮದ್ ಹ್ಯಾರಿಸ್, ಸನವರ, ಸಂಪತ್ ಮತ್ತು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.