ಮುಖ್ಯಮಂತ್ರಿ‌ ಯಡಿಯೂರಪ್ಪ ಉತ್ತಮ ಆಡಳಿತ ನೀಡಲಿ: ಯೋಗೀಶ್ ಶೆಟ್ಟಿ

ಉಡುಪಿ: ಯಡಿಯೂರಪ್ಪನವರು‌ ಅಂದು ಮುಖ್ಯಮಂತ್ರಿಯಾಗಿದ್ದಾಗ ಗೋಲಿಬಾರ್ ನಡೆಸಿದ್ದರು. ಇಂದು ಲಾಠಿಚಾರ್ಜ್ ನಡೆಸಿದ್ದಾರೆ. ಇದು ಆಡಳಿತವೇ? ರಾಜ್ಯದ ಜನತೆಗೆ ಉತ್ತಮ ಆಡಳಿತ ನೀಡಲಿ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ತಿಳಿಸಿದ್ದಾರೆ.
ಪ್ರವಾಹ ಅದ ಮೊದಲ ದಿನದಿಂದ ಸ್ಪಂದಿಸದ ಮುಖ್ಯಮಂತ್ರಿಗಳು ತಮ್ಮ ರಾಜಕೀಯ ಮೇಲಾಟಕ್ಕೆ ದೆಹಲಿಯಲ್ಲಿದ್ದರು. ತಡವಾಗಿ ಬುದ್ದಿ ಬಂದು ಬಂದರಾದರೂ ತಮ್ಮ ಅದಿಕಾರದ ದರ್ಪ ಬಿಡಲಿಲ್ಲ. ಹಿಂದೆ 2008ರಲ್ಲಿ ಮುಖ್ಯಮಂತ್ರಿ ಆದಾಗ ಹಾವೇರಿಯಲ್ಲಿ ಗೊಬ್ಬರ ಕೇಳಲು ಬಂದ ರೈತರ ಮೇಲೆ ಗೋಲಿಬಾರ್ ಮಾಡಿದ್ದರು.
ಇದೀಗ ಗದಗದಲ್ಲಿ ಪ್ರವಾಹ ಪೀಡಿತರು ಅನ್ನ ನೀರು ಕೇಳಲು ಬಂದರೆ ಅವರ ಮೇಲೆ ಲಾಠಿ ಚಾರ್ಜ್. ಯಡಿಯೂರಪ್ಪ ಅವರು ಸರ್ವಾಧಿಕಾರಿ ರೀತಿಯಲ್ಲಿ ನಡೆದುಕೊಂಡು ಬರುತ್ತಿದ್ದಾರೆ.
ಕೊಡಗಿನಲ್ಲಿ ಪ್ರವಾಹ ಬಂದಾಗ ಆಗಿನ ಮುಖ್ಯಮಂತ್ರಿ ಆಗಿದ್ದ ಕುಮಾರಸ್ವಾಮಿ ಅವರು ನಡೆದುಕೊಂಡ ರೀತಿ ನೆನೆಸಿಕೊಳ್ಳಬೇಕು. ಅದು ನಿಜಕ್ಕೂ ಮಾದರಿ ಎಂದರು. ಈಗ ಕುಮಾರಸ್ವಾಮಿ ಅವರು ಮಾಜಿ ಆದರೂ ತೀವ್ರ ಜ್ವರದ ನಡುವೆ ಇಂದು ಬೆಳಗಾವಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಿಜಕ್ಕೂ ಅವರ ಜನಪರ ಕಾಳಜಿಯನ್ನು ತೋರಿಸುತ್ತದೆ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.