ಉಡುಪಿ: ಜೆಸಿಐ ಉಡುಪಿ ಇಂದ್ರಾಳಿ ಘಟಕದ 2020ನೇ ಸಾಲಿನ ಜೆಸಿಐ ಸಪ್ತಾಹದ ಸಮಾರೋಪ ಸಮಾರಂಭವು ಮಣಿಪಾಲದ ಹೋಟೆಲ್ ಮಧುವನ ಸೇರಾಯ್ ನ ಮೈತ್ರಿ ಹಾಲ್ ನಲ್ಲಿ ನಡೆಯಿತು.
ಘಟಕದ ಅಧ್ಯಕ್ಷ ಎಂ ಎನ್ ನಾಯಕ್ ವಲಯಾಧ್ಯಕ್ಷ ಕಾರ್ತಿಕೇಯ ಮಧ್ಯಸ್ಥ ಹಾಗೂ ವಲಯ ಉಪಾಧ್ಯಕ್ಷ ಮೇಧಾವಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಮಣಿಪಾಲದ ನಗರಸಭಾ ಕಟ್ಟಡದಲ್ಲಿ ಇರುವ ಗ್ರಾಮ ಕರಣಿಕರ ಕಚೇರಿ ಗೆ ವಾಟರ್ ಪ್ಯೂರಿಫೈರ್ ನ ಕೊಡುಗೆ ಹಾಗೂ ಫಿಟ್ ಇಂಡಿಯಾದ ಕಾರ್ಯಕ್ರಮ ದ ಅಂಗವಾಗಿ ಸ್ಯಾನಿಟೈಸರ್ ಸ್ಟಾಂಡ್ ವಿಥ್ ಸ್ಯಾನಿಟೈಸರ್ ಕೊಡುಗೆಯಾಗಿ ನೀಡಲಾಯಿತು.ಕಾರ್ಯಕ್ರಮದಲ್ಲಿ ಫಟಕದ ಸದಸ್ಯರು ಭಾಗವಹಿಸಿದ್ದರು.
ಸಾರ್ವಜನಿಕ ರಿಗೆ ಮಾಸ್ಕ್ ವಿತರಣೆ, ರಕ್ತದಾನ ಶಿಬಿರ, ಪೇಪರ್ ಬ್ಯಾಗ್ ವಿತರಣೆ, ಪ್ಲಾಸ್ಮಾ ಡೊನೇಷನ್ ಜಾಗೃತಿ, ಪ್ಲಾಸ್ಟಿಕ್ ಮುಕ್ತ ಪರಿಸರ ಇತ್ಯಾದಿ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗಿತ್ತು.
ಸಮಾರಂಭದಲ್ಲಿ ಕಾರ್ಯದರ್ಶಿ ಜೆಸಿ ರಾಧಾಕೃಷ್ಣ, ಜೆಸಿ ಸುಜಯಶೆಟ್ಟಿ, ಜ್ಯೋತಿ ಪ್ರಶಾಂತ್ ಶೇಷಗಿರಿನಾಯಕ್ ರಾಮಚಂದ್ರ ಪ್ರಭು ಹಾಗೂ ಸದಸ್ಯರು ಉಪಸ್ಥಿತರಿದ್ದರು.