ಉಡುಪಿ: ಭಾರತವು ಧರ್ಮ ಮತ್ತು ಆಧ್ಯಾತ್ಮಿಕತೆಗೆ ಬಹಳ ಪ್ರಸಿದ್ಧವಾದ ದೇಶವಾಗಿದೆ. ಜಗತ್ತಿನಲ್ಲಿ ವಿಶ್ವಗುರುವಾಗಿ ಕಂಗೊಳಿಸುತ್ತಿರುವ ದೇಶವಾಗಿದೆ. ಈ ದೇಶದಲ್ಲಿ ಅನೇಕ ದಾರ್ಶನಿಕರು ಅವಾತರವನ್ನು ಎತ್ತಿದ್ದಾರೆ. ಅದರಲ್ಲಿ ಮಧ್ವಾಚಾರ್ಯರು ಪ್ರಮುಖರಾಗಿದ್ದಾರೆ ಎಂದು ಪರ್ಯಾಯ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು.
ಮಧ್ವಾಚಾರ್ಯರ ಸಿದ್ದಾಂತ ಜಗತ್ತ್ ಮಾನ್ಯವಾದ ಸಿದ್ಧಾಂತವಾಗಿದೆ. ವೇದಾಂತಗಳಲ್ಲಿ ಅತ್ಯಂತ ಪರಿಷ್ಕೃತ, ನಿಷ್ಕೃಷ್ಟವಾದಂತಹ ತತ್ವಶಾಸ್ತ್ರವೆಂದರೆ ಅದು ದ್ವೈತ ಸಿದ್ದಾಂತ. ಅಂತಹ ದ್ವೈತ ಸಿದ್ಧಾಂತವನ್ನು ಪ್ರತಿಷ್ಠಾಪನೆ ಮಾಡಿದವರು ಜಗದ್ಗುರು ಮಧ್ವಾಚಾರ್ಯರರು. ಈ ದ್ವೈತ ಸಿದ್ಧಾಂತವನ್ನು ಒಂದು ದೇಶದಲ್ಲಿ ವಿಶ್ವವಿಖ್ಯಾತವೆಂದು ಕರೆದಿದ್ದಾರೆ. ಅಂತಹ ದಾರ್ಶನಿಕರಿಗೆ ವಿಶೇಷವಾದ ಗೌರವವನ್ನು ಭಾರತ ಸರಕಾರವು ನೀಡುತ್ತಿರುವುದು ಅತ್ಯಂತ ಸಂತೋಷದ ವಿಷಯವಾಗಿದೆ ಎಂದರು.












