ಉಡುಪಿ:ತೆರಿಗೆ ಪಾವತಿ ಚಲನ್ ಪರಿಶೀಲನೆಗೆ ಸೂಚನೆ

ಉಡುಪಿ: ಉಡುಪಿ ನಗರಸಭೆಗೆ ಪಾವತಿಸುವ ತೆರಿಗೆಯಲ್ಲಿ ಯೂನಿಯನ್ ಬ್ಯಾಂಕ್ ಸೀಲ್ ದುರ್ಬಳಕೆ ಮಾಡಿ ನಗರಸಭೆ ಖಾತೆಗೆ
ಜಮಾ ಮಾಡದೇ ಯೂನಿಯನ್ ಬ್ಯಾಂಕ್ ಸೀಲ್‌ನ್ನು ಹಾಕಿರುವ ಚಲನ್‌ಗಳು ಈ ಕಛೇರಿಗೆ ಬರುತ್ತಿದ್ದು, ಆರೋಪಿಗಳು ಬ್ಯಾಂಕ್ ಸೀಲ್‌ನ್ನು ದುರ್ಬಳಕೆ ಮಾಡಿ ತೆರಿಗೆ ವಂಚಿಸಿರುವುದು ಕಂಡು ಬಂದಿದ್ದು, ಈಗಾಗಲೇ ಪ್ರಕರಣ ದಾಖಲಾಗಿರುತ್ತದೆ.

ಉಡುಪಿ ನಗರಸಭೆ ಆಸ್ತಿತೆರಿಗೆ ಹಾಗೂ ಇತರೇ ಸೇವೆಯ ಚಲನ್‌ಗಳನ್ನು ಮಾಡಲು ಮೂರನೇ ವ್ಯಕ್ತಿಗೆ ನಗದನ್ನು ನೀಡಿ ತೆರಿಗೆ ಪಾವತಿಸಿದ್ದಲ್ಲಿ,
ಚಲನ್‌ನೊಂದಿಗೆ ಕಛೇರಿಗೆ ಭೇಟಿ ನೀಡಿ ಕಂದಾಯ ವಿಭಾಗದಲ್ಲಿ ಪರಿಶೀಲಿಸಿಕೊಳ್ಳುವುದು ಹಾಗೂ ತೆರಿಗೆ ವಂಚನೆ ಪ್ರಕರಣದಲ್ಲಿ ಆರೋಪಿ ಯಾಗಿರುವವರಿಗೆ

ತೆರಿಗೆ ಪಾವತಿಸಲು ನಗದು ನೀಡಿರುವವರು ಕೂಡ, ಪಾವತಿಸಿರುವ ತೆರಿಗೆ ಚಲನ್‌ಅನ್ನು ನಗರಸಭೆಗೆ ಹಾಜರುಪಡಿಸಿ ಪರಿಶೀಲಿಸಿಕೊಳ್ಳುವಂತೆ ನಗರಸಭೆ ಪೌರಾಯುಕ್ತರ ಕಛೇರಿ ಪ್ರಕಟಣೆ ತಿಳಿಸಿದೆ.