ಉಡುಪಿ:ಶ್ರೀ ವೈ ಎಲ್ ಎನ್ ಜೋತಿಷ್ಯ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಹಾಗೂ ಇಂಚರ ಸರ್ಜಿಕಲ್ ಕ್ಲಿನಿಕ್ ಹಾಗೂ ರೋಟರಿ ಕ್ಲಬ್ ಉಡುಪಿ ಹಾಗೂ ಇನ್ನರ್ ವೀಲ್ ಕ್ಲಬ್ ಉಡುಪಿ ಇವರ ವತಿಯಿಂದ ಮಹಿಳೆಯರಲ್ಲಿ ಕ್ಯಾನ್ಸರ್ ಬಗ್ಗೆ ಮಾಹಿತಿ ಶಿಬಿರ ಉಡುಪಿ ಕಡಿಯಾಳಿಯ ಮಹಿಷ ಮರ್ದಿನಿ ಹೈಯರ್ ಪ್ರೈಮರಿ ಶಾಲೆಯ ರೋಟರಿ ಸಭಾಭವನದಲ್ಲಿ ತಾರೀಕು 15.01.2026ರಂದು ನೆರವೇರಿತು.

ಇಂಚರ ಸರ್ಜಿಕಲ್ ತಜ್ಞ ಡಾ ವೈ ಸುದರ್ಶನ್ ರಾವ್ ಇವರು ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್, ಗರ್ಭಕೋಶದ ಕ್ಯಾನ್ಸರ್, ಅಂಡಾಶಯದ ಕ್ಯಾನ್ಸರ್ ಗಳು ಬರುವ ಕಾರಣಗಳು, ಅವುಗಳ ಚಿಹ್ನೆ ,ಚಿಕಿತ್ಸಾ ವಿಧಾನ, ಹಾಗೂ ಕ್ಯಾನ್ಸರ್ ಬರದಂತೆ ವ್ಯಾಕ್ಸಿನ್ ಇರುವ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು. ಸುಮಾರು 50 ಜನ ಶಿಬಿರಾರ್ಥಿಗಳು ಪ್ರಯೋಜನವನ್ನು ಪಡೆದುಕೊಂಡರು.
















