ಉಡುಪಿ:ಗೋಲ್ಡ್ಮನ್ ಸ್ಯಾಕ್ಸ್ ಅಂದಾಜು ಪ್ರಕಾರ ಭಾರತ 2025 ರ ವೇಳೆಗೆ ಎರಡನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಲಿದೆ. ಇದನ್ನು ಸಾಧಿಸಬೇಕಾದರೆ ಯುವಜನರು ಕೌಶಲವಂತರಾಗಬೇಕು ಎಂದು ಉದ್ಯಮಿ ಅಜಯ್ ಪುರುಷೋತ್ತಮ ಶೆಟ್ಟಿ ಹೇಳಿದರು.
ನವದೆಹಲಿಯ ಭಾರತ ಮಂಟಪನಲ್ಲಿ ಯುವ ಈವೆಂಟ್ಸ್ ವತಿಯಿಂದ ನಡೆದ ಜಯಘೋಷ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಮೈಕ್ರೋಸಾಫ್ಟ್ ಮುಂತಾದ ವಿದೇಶಿ ಕಂಪೆನಿಗಳು ಭಾರತದಲ್ಲಿ ಸೇವೆಯನ್ನು ಸ್ಥಗಿತಗೊಳಿಸಿದರೂ ಭಾರತಕ್ಕೆ ಯಾವುದೇ ಹಿನ್ನಡೆಯಾಗಬಾರದು. ಈ ಹಿನ್ನೆಲೆಯಲ್ಲಿ ಭಾರತವು ತನ್ನದೇ ಆದ ಓಎಸ್, ಚಿಪ್‌ಗಳು ಮತ್ತು ಎಐ ಸೃಷ್ಟಿಸಬೇಕೆಂದು ಕರೆ ನೀಡಿದರು.ಮೋದಿ ಸರ್ಕಾರ ದೇಶದ ಹಿತಕ್ಕೆ ಪೂರಕವಾಗಿ ಮಹತ್ವದ ತೀರ್ಮಾನಗಳನ್ನು ಕೈಗೊಳ್ಳುತ್ತಿದ್ದು, ಅಮೆರಿಕನ್ ಕುಲಾಂತರಿ ಬೆಳೆ, ಡೈರಿ ಉತ್ಪನ್ನ ನಿರಾಕರಣೆ ಮತ್ತು ರಷ್ಯಾದಿಂದ ಕಡಿಮೆ ಬೆಲೆಯ ತೈಲ ಖರೀದಿ ಇದಕ್ಕೊಂದು ಉದಾಹರಣೆಯಾಗಿದೆ ಎಂದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್, ದೆಹಲಿ ಸರ್ಕಾರದ ಸಚಿವ ಕಪಿಲ್ ಮಿಶ್ರಾ, ದೇವೇಂದ್ರ ಪಾಲ್ ವತ್ಸ್ ಮತ್ತು ಪವರ್ ಮಿತ್ರ ಸಂಸ್ಥೆಯ ಸ್ಥಾಪಕ ವಿಕೇಶ್ ಶರ್ಮಾ ಮೊದಲಾದವರು ಉಪಸ್ಥಿತರಿದ್ದರು.


















