ಉಡುಪಿ:ಇಂಡಿಪೆಂಡೆನ್ಸ್ ಕ್ರಿಕೆಟ್ ರೋಟರ‍್ಯಾಕ್ಟ್ ಕ್ಲಬ್: ಬ್ರಹ್ಮಾವರಕ್ಕೆ ಪ್ರಶಸ್ತಿ

ಉಡುಪಿ:ಸೀನಿಯರ್ ಛೇಂಬರ್ ಇಂಟರ್‌ನ್ಯಾಷನಲ್ ಉಡುಪಿ ಮತ್ತು ನೇಜಾರ್ ಲೀಜನ್, ರೋಟರ‍್ಯಾಕ್ಟ್ ಕ್ಲಬ್, ಬ್ರಹ್ಮಾವರ ಇವರ ಸಂಯುಕ್ತ ಆಶ್ರಯದಲ್ಲಿ ನೇಜಾರು ಕ್ರೀಡಾಂಗಣದಲ್ಲಿ ಜರುಗಿದ ಇಂಡಿಪೆಂಡೆನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾಟವನ್ನು ಸೀನಿಯರ್ ಛೇಂಬರ್ ಇಂಟರ್‌ನ್ಯಾಷನಲ್‌ನ ನಿಕಟಪೂರ್ವ ರಾಷ್ಟ್ರೀಯ ಅಧ್ಯಕ್ಷ ಚಿತ್ರಕುಮಾರ್ ಉದ್ಘಾಟಿಸಿ ಶುಭ ಹಾರೈಸಿದರು.

ಸೀನಿಯರ್ ಛೇಂಬರ್ ಉಡುಪಿ ಲೀಜನ್ ಅಧ್ಯಕ್ಷ ಶಿವಾನಂದ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಮುಖ್ಯ ಅತಿಥಿಯಾಗಿ ಸೀನಿಯರ್ ಛೇಂಬರ್ ರಾಷ್ಟ್ರೀಯ ಅಧಿಕಾರಿ ಜಗದೀಶ್ ಕೆಮ್ಮಣ್ಣು, ರೋರ‍್ಯಾಕ್ಟ್ ಸಭಾಪತಿ ಸುಂದರ್‌ರಾಮ್ ಶೆಟ್ಟಿ ಉಪಸ್ಥಿತರಿದ್ದರು.

ಜಂಟಿ ಆತಿಥ್ಯ ವಹಿಸಿದ ಸೀನಿಯರ್ ಛೇಂಬರ್ ನೇಜಾರು ಲೀಜನ್ ಅಧ್ಯಕ್ಷ ಸುರೇಶ್ ಅಮೀನ್, ಕಾರ್ಯಕ್ರಮದ ನಿರ್ದೇಶಕರಾದ ಸುಶೀಲ್ ಬೋಳಾರ್, ಸಂಯೋಜಕ ನಿತ್ಯಾನಂದ ನೇಜಾರು, ವಿಜಯಕುಮಾರ್ ಉದ್ಯಾವರ, ಉಮೇಶ್ ಅಮೀನ್, ತುಳಸಿದಾಸ್, ಶಂಕರ್ ಪೂಜಾರಿ, ರೋಹಿಣಿ ಉಮೇಶ್, ಜಯಲಕ್ಷ್ಮಿ ಉಪಸ್ಥಿತರಿದ್ದರು.
ಪುರುಷರ ವಿಭಾಗ ಹಾಗೂ ಮಹಿಳಾ ವಿಭಾಗದ ಕ್ರಿಕೆಟ್ ಪಂದ್ಯಾಟದ ವಿಜೇತ ತಂಡದ ಪರವಾಗಿ ಬ್ರಹ್ಮಾವರ ರೋರ‍್ಯಾಕ್ಟ್ ಅಧ್ಯಕ್ಷ ಆಶಿಶ್ ಅಂದ್ರಾದೆ ಪ್ರಶಸ್ತಿ ಸ್ವೀಕರಿಸಿದರು. ಎನ್.ಜಿ. ಸುಕುಮಾರ್ ನಿರೂಪಿಸಿ, ಮಿತ್ರಕುಮಾರ್ ವಂದಿಸಿದರು.