ಉಡುಪಿ:15- 8- 2025 ರ ಶುಕ್ರವಾರದಂದು ನಮ್ಮ ದೇಶದ 79ನೆಯ ಸ್ವಾತಂತ್ರ್ಯೋತ್ಸವವನ್ನು ಇಂಚರ ಸರ್ಜಿಕಲ್ ಕ್ಲಿನಿಕ್ ಉಡುಪಿ ಹಾಗೂ ಶ್ರೀ ವೈ ಎಲ್ ಎನ್ ಜೋತಿಷ್ಕ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಕುಕ್ಕಿಕಟ್ಟೆ, ಉಡುಪಿ ಇವರ ಸಹಯೋಗದಲ್ಲಿ ಸಿಹಿ ಮೂತ್ರ ರೋಗದಿಂದ ಪಾದಗಳ ರಕ್ಷಣೆ ಕುರಿತಾಗಿ ಮಾಹಿತಿ ಶಿಬಿರ ಹಾಗೂ 45 ಜನ ಫಲಾನುಭವಿಗಳಿಗೆ ಉಚಿತ ಪಾದರಕ್ಷೆ ವಿತರಣಾ ಕಾರ್ಯಕ್ರಮವನ್ನು ನೆರವೇರಿಸುವುದರ ಮೂಲಕ ಆಚರಿಸಲಾಯಿತು.
ಕೊಳಲಗಿರಿಯ ಖ್ಯಾತ ಕುಟುಂಬ ವೈದ್ಯ ಹಾಗೂ ಸಮಾಜಸೇವಕ, ಹೋಂ ಡಾಕ್ಟರ್ಸ್ ಫೌಂಡೇಶನ್ ನ ಸಂಸ್ಥಾಪಕ ಡಾ| ಶಶಿಕಿರಣ್ ಶೆಟ್ಟಿ ಇವರು ಅತಿಥಿಗಳಾಗಿ ಆಗಮಿಸಿದ್ದರು. ವಂದೇ ಮಾತರಂ ಪ್ರಾರ್ಥನೆ ಯೊಂದಿಗೆ ಕಾರ್ಯಕ್ರಮ ವನ್ನು ಆರಂಭಿಸಲಾಯಿತು. ಶ್ರೀ ವೈ ಭುವನೇಂದ್ರ ರಾವ್ ಇವರು ಅತಿಥಿಗಳನ್ನು ಹಾಗೂ ಶಿಬಿರಾರ್ಥಿಗಳನ್ನು ಸ್ವಾಗತಿಸಿದರು.
ಇಂಚರ ಸರ್ಜಿಕಲ್ ಕ್ಲಿನಿಕ್ ನ ವೈದ್ಯರಾದ ಡಾಕ್ಟರ್ ವೈ ಸುದರ್ಶನ್ ರಾವ್ ಇವರು ಡಯಾಬಿಟಿಸ್ ನಿಂದ ಪಾದಗಳಿಗೆ ಯಾವ ರೀತಿ ತೊಂದರೆಯಾಗುತ್ತದೆ. ಈ ಪಾದಗಳನ್ನು ಉಳಿಸಿಕೊಳ್ಳಲು ನಾವೇನು ಮಾಡಬೇಕು ಹಾಗು ಯಾವ ರೀತಿ ಚಿಕಿತ್ಸೆ ಮಾಡಬೇಕು ಹಾಗೂ ಸರಿಯಾದ ಪಾದರಕ್ಷೆಯನ್ನು ಧರಿಸುವ ಮಹತ್ವದ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ವಿವರವಾಗಿ ತಿಳಿಸಿ ಹೇಳಿದರು.


ಅತಿಥಿಗಳಾದ ಡಾ| ಶಶಿಕಿರಣ್ ಶೆಟ್ಟಿ ಇವರು ಮಾತನಾಡುತ್ತಾ ಆರೋಗ್ಯದ ಬಗ್ಗೆ ಕಾಳಜಿ ಇರಬೇಕು ಆದರೆ ಖಾಯಿಲೆಯ ಬಗ್ಗೆ ಭಯವನ್ನು ಬೆಳೆಸಿಕೊಳ್ಳಬಾರದು ಎಂದು ಉದಾಹರಣೆಯ ಮೂಲಕ ವಿವರಿಸಿದರು. ಶ್ರೀ ವೈ ಎಲ್ ಎನ್ ಜೋತಿಷ್ಕ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿಗಳಾದ ಶ್ರೀ ವೈ ಶಾಂತಿನಾಥ ರಾವ್ ಹಾಗೂ ಡಾ| ವೈ ರವೀಂದ್ರನಾಥರಾವ್ ಇವರು ಫಲಾನುಭವಿಗಳಿಗೆ ಡಯಾಬಿಟಿಸ್ ಪಾದರಕ್ಷೆಗಳನ್ನು ಸಾಂಕೇತಿಕವಾಗಿ ವಿತರಿಸಿದರು. ಡಾ| ವಿದ್ಯಾ ಎಸ್ ರಾವ್ ಇವರು ಧನ್ಯವಾದಗಳನ್ನು ಅರ್ಪಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.
ಮಯೂರ್ ರಾವ್ ಹಾಗೂ ಶ್ರೀಮತಿ ನಿಕಿತಾ ಇವರು ಕಾರ್ಯಕ್ರಮ ನಿರೂಪಿಸಿದರು ಶ್ರೀಮತಿ ಸುಪ್ರೀತಾ , ರಂಜಿತ್ ಹಾಗೂ ಪ್ರಜ್ವಲ್, ಶ್ರೀಮತಿ ಮಾಲತಿ ಹಾಗೂ ಕುಮಾರಿ ರಮ್ಯಾ ಇವರು ಇಡೀ ಕಾರ್ಯಕ್ರಮವನ್ನು ನಿರ್ವಹಿಸಿದರು. ಸುಮಾರು 90 ಜನ ಈ ಮಾಹಿತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅದರ ಉಪಯೋಗವನ್ನು ಪಡೆದುಕೊಂಡರು. ಡಯಾಬಿಟಿಸ್ ಪಾದ ರಕ್ಷೆಗಳಿಗೆ ಹೆಸರುವಾಸಿಯಾದ ApSon ಸಂಸ್ಥೆಯ ಪ್ರತಿನಿಧಿಗಳಾದ ಶ್ರೀಧರ್ ಹಾಗೂ ಅಶಿತ್ ರಾವ್ ಉಪಸ್ಥಿತರಿದ್ದರು.












