ಉಡುಪಿ: ನಾಳೆ (ಅ.18) “ಹರ್ಷ” ಸಮೂಹ ಸಂಸ್ಥೆಯ ಅತೀ ದೊಡ್ಡ ಗೃಹೋಪಕರಣಗಳ ನೂತನ ಮಳಿಗೆ ಉದ್ಘಾಟನೆ

ಉಡುಪಿ: ಹರ್ಷ ಸಮೂಹ ಸಂಸ್ಥೆಯ ಅತೀ ದೊಡ್ಡ ಗೃಹೋಪಕರಣಗಳ ನೂತನ ಮಳಿಗೆ ನಗರದ ಸಿಟಿಬಸ್ ನಿಲ್ದಾಣದ ಬಳಿಯ ನೂತನ “ಶ್ರೀ ದತ್ತಕೃಪಾ” ಕಟ್ಟಡದಲ್ಲಿ ನಾಳೆ (ಅ.18 ) ರಂದು ಸಂಜೆ 4.30 ಕ್ಕೆ ಉದ್ಘಾಟನೆಗೊಳ್ಳಲಿದೆ.

ಉಡುಪಿಯ ಪ್ರಖ್ಯಾತ ವಾಣಿಜೋದ್ಯಮ ಸಂಸ್ಥೆಗಳಲ್ಲೊಂದಾದ “ಹರ್ಷ” ಸಮೂಹ ಸಂಸ್ಥೆಯು ಇದೀಗ ಎಲ್ಲಾ ಗ್ರಾಹಕರಿಗೆ ಅನುಕೂಲವಾಗುವಂತೆ ಗೃಹಬಳಕೆಯ, ಇಲೆಕ್ಟ್ರಾನಿಕ್ ವಸ್ತು, ಫರ್ನಿಚರ್ ವಸ್ತುಗಳನ್ನು ಒಂದೇ ಸೂರಿನಡಿಯಲ್ಲಿ ನೀಡಲಿದೆ.

ಮಾಜಿ ಸಚಿವ ವಿನಯಕುಮಾರ್ ಸೊರಕೆ ನೂತನ ಶಾಖೆಯನ್ನು ಉದ್ಘಾಟಿಸಲಿದ್ದಾರೆ. ಉಡುಪಿ ನಗರ ಸಭೆಯ ಮಾಜಿ ಅಧ್ಯಕ್ಷರಾದ ಎಂ ಸೋಮಶೇಖರ್ ಭಟ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಈ ಸಮಾರಂಭದಲ್ಲಿ ರಾಜ್ಯ ಹಿಂದುಳಿದ ವರ್ಗ ಮತ್ತು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ವಿಧಾನ ಸಭೆಯ ಶಾಸಕ ಕೆ.ರಘುಪತಿ ಭಟ್, ಉಡುಪಿಯ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಉಡುಪಿ ನಗರ ಸಭೆಯ ಅಧ್ಯಕ್ಷೆ ಸುಮಿತ್ರಾ ನಾಯಕ್, ಮಣಿಪಾಲ ಟೆಕ್ನಾಲಜಿ ಲಿಮಿಟೆಡ್ ನ ಕಾರ್ಯಾ ಪ್ರವರ್ಥಕ ಗೌತಮ್ ಪೈ, ಚಿತ್ರಾಪುರ ಮಠದ ಆಡಳಿತ ಮಂಡಳಿಯ ಅಧ್ಯಕ್ಷ ಪ್ರವೀಣ್ ಪಿ. ಕಡಲೆರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸೂರ್ಯಪ್ರಕಾಶ್ ಕೆ. ತಿಳಿಸಿದ್ದಾರೆ‌.

ರಾಜ್ಯಾದ್ಯಂತ ಸಾವಿರಾರು ಗ್ರಾಹಕರನ್ನು ಒಳಗೊಂಡಿರುವ ಹರ್ಷ ಸಮೂಹ ಸಂಸ್ಥೆಯ ಈ ನೂತನ ಶಾಖೆ 16ನೇ ಮಳಿಗೆಯಾಗಿದೆ.
ಉತ್ತಮ ಗುಣಮಟ್ಟದ ಸೇವೆಯಿಂದ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿರುವ ಹರ್ಷ ಸಮೂಹ ಸಂಸ್ಥೆ ಉಡುಪಿಯಲ್ಲಿ ಮೂರನೇ ಮಳಿಗೆಯನ್ನು ಆರಂಭಿಸುತ್ತಿದೆ. 40,000 ಸಾವಿರ ಚದರಡಿ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುವ ಈ ನೂತನ ಮಳಿಗೆಯು 4 ಅಂತಸ್ತನ್ನು ಹೊಂದಿದ್ದು, ಸಂಪೂರ್ಣ ಹವಾನಿಯಂತ್ರಿತವಾಗಿದೆ. ಈ ನೂತನ ಮಳಿಗೆಯಲ್ಲಿ ಉತ್ಕೃಷ್ಟ ಗುಣಮಟ್ಟದ ಉಪಕರಣಗಳೊಂದಿಗೆ ಅಡುಗೆ ಸಾಧನಗಳು, ಹೊಚ್ಚಹೊಸ ಡಿಜಿಟಲ್ ತಂತ್ರಜ್ಞಾನದ ವಸ್ತು ವೈವಿಧ್ಯಗಳು, ಫರ್ನಿಚರ್ ಗಳು ಹಾಗೂ ಫಿಟ್ನೆಸ್ ಸಂಬಂಧಿತ ಉಪಕರಣಗಳು ಒಂದೇ ಸೂರಿನಡಿಯಲ್ಲಿ ಗ್ರಾಹಕರಿಗೆ ಸಿಗಲಿದೆ.

ಈ ನೂತನ ಮಳಿಗೆಯ ಮೊದಲ ಮಹಡಿಯಲ್ಲಿರುವ ಇನ್ನೋವೇಶನ್ ಝೋನ್ ನಲ್ಲಿ ಆಡಿಯೋ ಸಿಸ್ಟಮ್, ಹೋಂ ಥಿಯೇಟರ್, ಸ್ಮಾರ್ಟ್ ಫೋನ್, ಕಂಪ್ಯೂಟರ್, ಲ್ಯಾಪ್ಟಾಪ್, ಪ್ರಿಂಟರ್ಸ್, ಕ್ಯಾಮೆರಾ, ಎಲ್ ಇಡಿ ಟಿವಿ, ಸ್ಮಾರ್ಟ್ ವಾಚ್ ಹಾಗೂ ಅವುಗಳಿಗೆ ಸಂಬಂಧಿಸಿದ ಇತರ ಸಲಕರಣೆಗಳು (ಆಕ್ಸೆಸರೀಸ್) ಸೇರಿದಂತೆ ಎಲ್ಲಾ ತರಹದ ಡಿಜಿಟಲ್, ಎಲೆಕ್ಟ್ರಾನಿಕ್ ಉಪಕರಣಗಳು ಲಭ್ಯವಿದೆ. ಎರಡನೇ ಮಹಡಿಯಲ್ಲಿರುವ ಕನ್ವೇನಿಯನ್ಸ್ ಝೋನ್ ನಲ್ಲಿ ಕುಕ್ಕಿಂಗ್ ಸೆಟ್, ಪ್ರೆಶರ್ ಕುಕ್ಕರ್, ಮಿಕ್ಸಿ, ಗ್ರೈಂಡರ್ ಹಾಗೂ ಫ್ಯಾನ್, ಕೂಲರ್, ಐರನ್ ಬಾಕ್ಸ್, ಕೆಟಲ್, ವಾಕ್ಯೂಮ್ ಕ್ಲೀನರ್ ಸೇರಿದಂತೆ ಎಲ್ಲಾ ಅಡುಗೆ ಉಪಕರಣಗಳು ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳು ಸಿಗಲಿವೆ.

ಮೂರನೇ ಮಹಡಿಯಲ್ಲಿ ಫ್ರೆಶ್ ನೆಸ್ ಝೋನ್ ನಲ್ಲಿ ಏರ್ ಕಂಡೀಷನರ್, ರೆಫ್ರಿಜಿರೇಟರ್, ವಾಷಿಂಗ್ ಮಷೀನ್, ಮೈಕ್ರೋವೇವ್, ಓವನ್, ಡೀಪ್ ಫ್ರೀಜರ್, ಹೆಲ್ತ್ ಮತ್ತು ಫಿಟ್ನೆಸ್ ಇಕ್ಯೂಕ್ಮೆಂಟ್ ಗಳು ಇರಲಿವೆ. ನಾಲ್ಕನೇ ಮಹಡಿಯಲ್ಲಿ ಲೈಫ್ ಸ್ಟೈಲ್ ಝೋನ್ ನಲ್ಲಿ ವಾರ್ಡ್ರೋಬ್, ಸೋಫಾ ಸೆಟ್, ಕಾರ್ಟ್, ಅಲ್ಮೇರಾ, ಡೈನಿಂಗ್ ಸೆಟ್, ಬೆಡ್ರೂಮ್ ಸೆಟ್, ಮ್ಯಾಟ್ರಿಕ್ಸ್ ಸೇರಿದಂತೆ ಮನೆ ಕಚೇರಿ ಗಳಿಗೆ ಬೇಕಾಗುವ ಎಲ್ಲಾ ತರಹದ ಫರ್ನಿಚರ್ ಗಳು ಲಭ್ಯವಿದೆ. ವಿಶಾಲವಾದ ಹರ್ಷದ ನೂತನ ಮಳಿಗೆಯು ರಾಷ್ಟ್ರೀಯ ಗುಣ ಮಟ್ಟದ ಡಿಸ್ಪ್ಲೇ ಯೊಂದಿಗೆ ಆಧುನಿಕ ಶಾಪಿಂಗ್ ತಾಣವಾಗಿ ಗ್ರಾಹಕರಿಗೆ ಮತ್ತಷ್ಟು ಹೆಚ್ಚಿನ ಶಾಪಿಂಗ್ ಅನುಭವವನ್ನು ನೀಡಲಿದೆ.

ಹರ್ಷ ಒಡೆತನ ಹೊಂದಿರುವ ಪ್ರಕಾಶ್ ರೀಟೇಲ್ಸ್ ಪ್ರೈ.ಲಿ ಉಡುಪಿಯ ಅಂಬಲಪಾಡಿಯಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದ್ದು, 1987ರ ಮಾರ್ಚ್ 9ರಂದು ಉಡುಪಿಯ ಕೆ.ಎಂ ಮಾರ್ಗದಲ್ಲಿ ಮೊದಲ ಮಳಿಗೆಯನ್ನು ಆರಂಭಿಸಿತ್ತು. ನಂತರದ ವರ್ಷಗಳಲ್ಲಿ ಮಂಗಳೂರು, ಪುತ್ತೂರು ,ಕುಂದಾಪುರ, ಬ್ರಹ್ಮಾವರ, ಸುರತ್ಕಲ್, ಶಿವಮೊಗ್ಗ, ಉತ್ತರ ಕರ್ನಾಟಕದ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಗುಲ್ಬರ್ಗ, ಬೆಂಗಳೂರಿನಲ್ಲಿ ಮಳಿಗೆಗಳನ್ನು ವಿಸ್ತರಿಸಿದೆ.