ರಾಜ್ಯದಲ್ಲಿ ಅತಿ ಹೆಚ್ಚು ಮಹಿಳಾ ಮತದಾರರಿರುವ ಜಿಲ್ಲೆ: ಉಡುಪಿಗೆ ಪ್ರಥಮ ಸ್ಥಾನ

ಉಡುಪಿ: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ – 2023 ರ ಪರಿಷ್ಕೃತ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗಿದ್ದು, ರಾಜ್ಯದಲ್ಲಿ ಅತ್ಯಂತ ಹೆಚ್ಚು ಮಹಿಳಾ ಮತದಾರರಿರುವ ಜಿಲ್ಲೆಯಾಗಿ ಉಡುಪಿ ಮೊದಲ ಸ್ಥಾನದಲ್ಲಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಅತ್ಯಂತ ಕಡಿಮೆ ಮಹಿಳಾ ಮತದಾರರನ್ನು ಹೊಂದಿರುವ ಜಿಲ್ಲೆಯಾಗಿದೆ ಎಂದು ಮುಖ್ಯ ಚುನಾವಣಾ ಅಧಿಕಾರಿಯ ಕಚೇರಿ ತಿಳಿಸಿದೆ.

Image
ಕೃಪೆ: ಮುಖ್ಯ ಚುನಾವಣಾ ಅಧಿಕಾರಿ ಕಚೇರಿ

ಉಡುಪಿಯಲ್ಲಿ 4,90,060 ಪುರುಷ ಮತದಾರರು ಹಾಗೂ 5,26,173 ಮಹಿಳಾ ಮತದಾರರಿದ್ದು ಒಟ್ಟು 10,16,245 ಮತದಾರರಿದ್ದಾರೆ. ಜಿಲ್ಲೆಯ ಲಿಂಗಾನುಪಾತ: 1074

ಬೆಂಗಳೂರು ಗ್ರಾಮಾಂತರದಲ್ಲಿ 14,90, 481 ಪುರುಷ ಮತದಾರರು ಹಾಗೂ 13,61,145 ಮಹಿಳಾ ಮತದಾರರಿದ್ದು ಒಟ್ಟು 28,52,123 ಮತದಾರರಿದ್ದಾರೆ ಜಿಲ್ಲೆಯ. ಲಿಂಗಾನುಪಾತ: 914

ಅತ್ಯಂತ ಹೆಚ್ಚು 54,820 ಯುವ ಮತದಾರರು ಬೆಳಗಾವಿ ಹಾಗೂ ಅತ್ಯಂತ ಕಡಿಮೆ ಕೊಡಗು ಜಿಲ್ಲೆಯಲ್ಲಿ 5,806 ಯುವ ಮತದಾರರು ನೊಂದಾಯಿಸಿಕೊಂಡಿದ್ದಾರೆ.