HomeTrendingಉಡುಪಿ-ಹೈದರಾಬಾದ್ ನಾನ್ ಎಸಿ ಸ್ಲೀಪರ್ ರಾಜಹಂಸ ಬಸ್ ಸಂಚಾರ ಆರಂಭ

ಉಡುಪಿ-ಹೈದರಾಬಾದ್ ನಾನ್ ಎಸಿ ಸ್ಲೀಪರ್ ರಾಜಹಂಸ ಬಸ್ ಸಂಚಾರ ಆರಂಭ

ಉಡುಪಿ: ಮಂಗಳೂರು ವಿಭಾಗದ ಉಡುಪಿ ಘಟಕದಿಂದ ಸಾರ್ವಜನಿಕ ಪ್ರಯಾಣಿಕರಿಗೆ ಪ್ರಸುತ್ತ ಕಾರ್ಯಾಚರಣೆಯಲ್ಲಿರುವ ಉಡುಪಿ-ಹೈದರಾಬಾದ್ ರಾಜಹಂಸ ವಾಹನ ಕಾರ್ಯಚರಣೆಯನ್ನು ಮೇಲ್ದರ್ಜೆಗೇರಿಸಿ ಸೆಪ್ಟೆಂಬರ್ 27 ರಿಂದ ಮಧ್ಯಾಹ್ನ 3 ಗಂಟೆಗೆ ಉಡುಪಿ-ಹೈದರಾಬಾದ್ ನಾನ್-ಎಸಿ ಸ್ಲೀಪರ್ ವಾಹನ ಅನುಸೂಚಿ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ.

ಸದರಿ ವಾಹನವು ಮರುದಿನ ಬೆಳಿಗ್ಗೆ 9.30ಕ್ಕೆ ಹೈದರಾಬಾದ್ ತಲುಪಲಿದ್ದು, ಹೈದರಾಬಾದ್ ನಿಂದ ಸಂಜೆ 5.30ಕ್ಕೆ ಬಿಟ್ಟು ಮರುದಿನ ಬೆಳಿಗ್ಗೆ 11 ಗಂಟೆಗೆ ಉಡುಪಿ ತಲುಪಲಿದೆ. ಪ್ರಯಾಣದ ದರವು ₹ 1250 ಎಂದು ನಿಗದಿಪಡಿಸಲಾಗಿದ್ದು, ಮುಂಗಡ ಬುಕ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಘಟಕ ವ್ಯವಸ್ಥಾಪಕರ ಪ್ರಕಟಣೆ ತಿಳಿಸಿದೆ.

error: Content is protected !!