ಉಡುಪಿ: ಕೆ.ಕೃಷ್ಣಮೂರ್ತಿ ಅಭಿಮಾನಿ ಬಳಗ ಉಡುಪಿ ಜಿಲ್ಲೆ, ಯಶೋಧ ಆಟೋ ಯೂನಿಯನ್ ಹಾಗೂ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಉಡುಪಿ ಇವರ ನೇತೃತ್ವದಲ್ಲಿ ಜಿಲ್ಲಾಡಳಿತ ಹಾಗೂ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಇದರ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರ ಭಾನುವಾರ ಮಥುರಾ ಕಂಫರ್ಟ್ಸ್ ನಲ್ಲಿ ನಡೆಯಿತು.
ರೆಡ್ ಕ್ರಾಸ್ ಕುಂದಾಪುರ ವಿಭಾಗದ ಸಭಾಪತಿ ಜಯಕರ ಶೆಟ್ಟಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೊರೊನಾ ಹಾಗೂ ವಿವಿಧ ಕಾರಣದಿಂದಾಗಿ ಎಲ್ಲಾ ಕಡೆ ರಕ್ತದ ಕೊರತೆ ಇದೆ.
ಹೀಗಾಗಿ ಕೃಷ್ಣ ಮೂರ್ತಿ ಆಚಾರ್ಯ ಅವರು ಸರಿಯಾದ ಸಮಯದಲ್ಲಿ
ಈ ಬೃಹತ್ ರಕ್ತದಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಇಂತಹ ಶಿಬಿರಕ್ಕೆ ಅನೇಕರ ಸಹಕಾರ ಬೇಕಾಗುತ್ತದೆ ಎಂದು ಹೇಳಿದರು.
ಅತಿಥಿಯಾಗಿ ಭಾಗವಹಿಸಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಅವರು ಮಾತನಾಡಿ, ಸಮಾಜ ಬೇರೆ ಬೇರೆ ಸ್ಥರಗಳಲ್ಲಿ ಎಷ್ಟೇ ಬೆಳೆದರೂ ಕೃತಕ ರಕ್ತ ಉತ್ಪಾದನೆ ಸಾಧ್ಯವಿಲ್ಲ. ಯುವಕರನ್ನು ಸಂಘಟಿಸಿ ಇಂತಹ ಸಮಾಜ ಸೇವೆ ಮಾಡುವುದು ಶ್ರೇಷ್ಠ ಕಾರ್ಯ ಎಂದರು.
ಸಮಾಜ ಸೇವಕ, ಸಂಘಟಕ ಕೆ.ಕೃಷ್ಣಮೂರ್ತಿ ಆಚಾರ್ಯ ಸ್ವಾಗತಿಸಿದರು, ವಿಶಾಲ ಶೆಟ್ಟಿ ನಿರೂಪಿಸಿದರು.
ವೇದಿಕೆಯಲ್ಲಿ ಪ್ರಕಾಶ್ ಸೈಮಂಡ್, ಉಪನ್ಯಾಸಕ ಬಾಲಕೃಷ್ಣ ಮುದ್ದೋಡಿ, ಅಮೃತಾ ಕೃಷ್ಣಮೂರ್ತಿ, ಕಡೆಕಾರ್ ಪಂ. ಅಧ್ಯಕ್ಷ ನವೀನ್ ಶೆಟ್ಟಿ, ಯುವರಾಜ್, ದಯಾನಂದ ಕಪ್ಪೆಟ್ಟು, ಸತೀಶ್ ಮಣಿಪಾಲ, ಸೌರಭ್ ಬಲ್ಲಾಳ್, ಉದಯ್, ಚರಣ್ ಬಂಗೇರ ಉಪಸ್ಥಿತರಿದ್ದರು.
ನೂರಾರು ಮಂದಿ ರಕ್ತದಾನಿಗಳು ಶಿಬಿರದಲ್ಲಿ ಭಾಗವಹಿಸಿದರು..