ಉಡುಪಿ: ತೋಟಗಾರಿಕಾ ಸಸಿಗಳು ಇಲಾಖಾ ದರದಲ್ಲಿ ಮಾರಾಟ

ಉಡುಪಿ: ಜಿಲ್ಲೆಯ ತೋಟಗಾರಿಕೆ ಕ್ಷೇತ್ರಗಳಲ್ಲಿ ರೈತರ ಹಾಗೂ ಸಾರ್ವಜನಿಕರ ಬೇಡಿಕೆ ಆಧಾರದ ಮೇಲೆ ತೋಟಗಾರಿಕೆ ಕಸಿ/ ಸಸಿ ಗಿಡಗಳನ್ನು ಉತ್ಪಾದಿಸಿ ಇಲಾಖಾ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.

ತೋಟಗಾರಿಕೆ ನಿರ್ದೇಶನಾಲಯದ ಸುತ್ತೋಲೆ ಪ್ರಕಾರ ಕಸಿ/ ಸಸಿ ಗಿಡಗಳ ಮಾರಾಟ ದರವನ್ನು ಪರಿಷ್ಕರಿಸಲಾಗಿದ್ದು, ಪರಿಷ್ಕರಿಸಿದ ಮಾರಾಟ ದರಗಳ ವಿವರಗಳು ಈ ಕೆಳಕಂಡಂತಿವೆ.

ಅಡಿಕೆ ಸಸಿಗೆ ₹ 20, ಕಸಿ ಗೇರು ಗಿಡ ₹ 32, ಕಾಳು ಮೆಣಸು ₹ 11, ಕಸಿ ಕಾಳು ಮೆಣಸು ₹ 32, ಕೋಕೊ ₹ 11, ತೆಂಗು (ಸ್ಥಳೀಯ) ₹ 70, ತೆಂಗು (ಹೈಬ್ರೀಡ್) ₹ 160, ನಿಂಬೆ ₹ 15, ಕರಿಬೇವು ₹ 12, ಮಲ್ಲಿಗೆಗೆ ₹ 10 ದರ ನಿಗದಿಪಡಿಸಲಾಗಿದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.