ಉಡುಪಿ: 25 ವರ್ಷ ಹಳೆಯ ಹೀರೋ ಹೊಂಡಾ ಸ್ಟೈಂಡರ್ ಬೈಕ್‌ನಲ್ಲಿ ದೇಶ ಸಂಚಾರ ಮಾಡಿದ್ದ ಪ್ರಜ್ವಲ್ ಶೆಣೈ ಅವರಿಗೆ ಉಡುಪಿಯ ಶಕ್ತಿ ಹೀರೋ ಮೋಟಾರ್ ಸಂಸ್ಥೆಯಲ್ಲಿ 14 ಲಕ್ಷ ಮೌಲ್ಯದ ಹೀರೋ ಸೆಂಟಿನ್ನಿಯಲ್ ಬೈಕ್‌ನ್ನು ಹಸ್ತಾಂತರ ಮಾಡಲಾಯಿತು.
ಉಡುಪಿಯ ಪ್ರಜ್ವಲ್ ಶೆಣೈ ಅವರು ಹಳೆಯ ಹೀರೋ ಹೋಂಡಾ ಬೈಕ್‌ನಲ್ಲಿ ದೇಶ ಸಂಚಾರ ಮಾಡಿದ್ದರು. ಇವರಿಗೆ ಬೈಕ್ ರೈಡಿಂಗ್ ಒಂದು ನಿರಂತರ ಹವ್ಯಾಸ. ತಮ್ಮ ತಂದೆ ರಾಜೇಂದ್ರ ಶೆಣೈ ಜೊತೆಗೂ ಇವರು ಬೈಕ್ ನಲ್ಲಿ ಸಾವಿರಾರು ಕಿ. ಮೀ ಪ್ರಯಾಣ ಮಾಡಿದ್ದರು.

17,982 ಎತ್ತರದ ವಿಶ್ವದ 2ನೇ ಅತೀ ಎತ್ತರದ ಪ್ರದೇಶ ಜಮ್ಮು ಕಾಶ್ಮೀರದ ಖರ್ದುಂಗ್ಲಾದಲ್ಲಿ ಕನ್ನಡ ಬಾವುಟ ಹಾರಿಸಿ ಕನ್ನಡಾಭಿಮಾನ ಮೆರೆದಿದ್ದರು. ಬಳಿಕ ಅಯೋಧ್ಯೆಗೂ ಬೈಕ್ ನಲ್ಲಿ ಹೋಗಿದ್ದರು. ಶಿರ್ವದ ರಾಜೇಂದ್ರ ಶೆಣೈ ಮತ್ತು ಮಗ ಪ್ರಜ್ವಲ್ ಶೆಣೈ ಅವರ ಸಾಹಸವನ್ನು ಗುರುತಿಸಿದ ಹೀರೋ ಮೋಟೋ ಕಾರ್ಪ್ ಸಂಸ್ಥೆ ಹೀರೋ ಸೆಂಟೆನ್ನಿಯಲ್ ಬೈಕ್ ನೀಡಿ ಗೌರವಿಸಿದೆ. ಇದರಿಂದ ಪ್ರಜ್ವಲ್ ಬಹಳ ಖುಷಿಗೊಂಡಿದ್ದಾರೆ.

ಸಂಸ್ಥೆಯ ಸಂಸ್ಥಾಪಕ ಡಾ। ಬ್ರಿಜ್ ಮೋಹನ್‌ಲಾಲ್ ಮುಂಜಾಲ್ ಅವರ 101ನೇ ಜನ್ಮ ದಿನದ ಸವಿ ನೆನಪಿಗಾಗಿ ತಯಾರಿಸಿದ 100 ಬೈಕ್‌ಗಳಲ್ಲಿ ಸುಮಾರು 14 ಲ. ರೂ. ಮೌಲ್ಯದ ಹೀರೋ ಸೆಂಟಿನ್ನಿಯಲ್ ಬೈಕ್‌ನ್ನು ಕರ್ನಾಟಕದ ಪ್ರಜ್ವಲ್ ಶೆಣೈ ಅವರಿಗೆ ಬೆಸ್ಟ್ ಕಸ್ಟಮರ್ ಅರ್ಹತೆಯ ರೂಪದಲ್ಲಿ ನೀಡಿದೆ.













