ಉಡುಪಿ:ತುಳು ಲಿಪಿಯಲ್ಲಿ ‘ಕೋಟಿ ಗೀತಾ ಲೇಖನ ಯಜ್ಞ’ ಬರೆದು ಮುಂಬಯಿಯ ಪ್ರಥಮ ಕನ್ನಡಿಗ ಎಂಬ ಹೆಗ್ಗಳಿಕೆ ಪಡೆದ ಹೇಮಂತ್ ಶೆಟ್ಟಿ

ಉಡುಪಿ:ಮುಲುಂಡ್ ನ ನಿವಾಸಿ , ಮುಲುಂಡ್ ಬಂಟ್ಸ್ ನ ತಂತ್ರಜ್ಞಾನ ಸಮಿತಿಯ ( ಐಟಿ ) ಕಾರ್ಯಾಧ್ಯಕ್ಷ ಹೇಮಂತ್ ಶೆಟ್ಟಿಯವರು ವಿಶೇಷವಾಗಿ ತುಳು ಲಿಪಿಯಲ್ಲಿ “ಕೋಟಿ ಗೀತಾ ಲೇಖನ ಯಜ್ಞ” ವನ್ನು ಬರೆದು ಉಡುಪಿಯ ಗೀತಾ ಮಂದಿರದಲ್ಲಿ ಪುತ್ತಿಗೆ ‌ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರಿಗೆ ಅರ್ಪಿಸಿದರು. ಮತ್ತು ಸ್ವಾಮೀಜಿಯವರಿಂದ ಆಶೀರ್ವಾದವನ್ನು ಪಡಕೊಂಡರು . ಈ ಮೂಲಕ ಹೇಮಂತ್ ಶೆಟ್ಟಿಯವರು ತುಳು ಲಿಪಿಯಲ್ಲಿ ಕೋಟಿ ಗೀತಾ ಲೇಖನ ಯಜ್ಞ ಪವಿತ್ರ ಭಗವದ್ಗೀತೆಯ ಸಾರವನ್ನು ಬರೆದ ಮುಂಬಯಿ ಪ್ರಥಮ‌ ಕನ್ನಡಿಗನೆಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ . ಹೇಮಂತ್ ಶೆಟ್ಟಿಯವರು ಮೂಲತಃ ಕಳತ್ತೂರ್ ಪಡು ಮನೆ ದಿವಂಗತ್ ವಿಠ್ಠಲ್ ಶೆಟ್ಟಿಯವರ ಪುತ್ರ.