ಆ.24ರಂದು ಉಡುಪಿಯಲ್ಲಿ ಹೆಜ್ಜೆ ಗೆಜ್ಜೆ ಸಂಸ್ಥೆಯಿಂದ “ನೂಪುರ ಝೇಂಕಾರ”

ಉಡುಪಿ: ಹೆಜ್ಜೆ ಗೆಜ್ಜೆ ನೃತ್ಯಾಲಯದ ಆಶ್ರಯದಲ್ಲಿ ವಿದುಷಿ ದೀಕ್ಷಾ ರಾಮಕೃಷ್ಣ ಅವರು ಸಂಯೋಜಿಸಿದ ಸುಮಾರು 23 ಕಲಾವಿದರನ್ನೊಳಗೊಂಡ ನೂತನ ಭರತನಾಟ್ಯ ನೃತ್ಯಬಂಧಗಳ “ನೂಪುರ ಝೇಂಕಾರ ಭರತನಾಟ್ಯ ಕಾರ್ಯಕ್ರಮ”ವನ್ನು ಆ. 24ರಂದು ಉಡುಪಿ ಕುಂಜಿಬೆಟ್ಟು ಸಮೀಪದ ಐವೈಸಿ ಇನ್ಫೋಸಿಸ್​ ಯಕ್ಷಗಾನ ಕಲಾರಂಗ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಹೆಜ್ಜೆ ಹೆಜ್ಜೆ ನಿರ್ದೇಶಕಿ ಯಶಾ ರಾಮಕೃಷ್ಣ ತಿಳಿಸಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ‌ ನೀಡಿದ‌ ಅವರು, ಅಂದು ಸಂಜೆ 5 ಗಂಟೆಗೆ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಮಂಗಳೂರಿನ ಸನಾತನ ನಾಟ್ಯಾಲಯದ ನಿರ್ದೇಶಕಿ ವಿದುಷಿ ಶಾರದಾಮಣಿ ಶೇಖರ್​, ಹಿರಿಯ ನೃತ್ಯ ಗುರು ವಿದುಷಿ ಶ್ರೀಲತಾ ನಾಗರಾಜ್​, ಭರತನಾಟ್ಯ ಕಲಾವಿದ ನಟುವನಾರ್​ ಮಂಜುನಾಥ ಎನ್​. ಪುತ್ತೂರು ಮತ್ತು ಸಮಾಜ ಸೇವಾ ಧುರೀಣ ಡಾ. ಶರಣಬಸವ ಭಾಗವಹಿಸಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ವಿದುಷಿ ದೀಕ್ಷಾ ರಾಮಕೃಷ್ಣ ಮತ್ತು ವಿದುಷಿ ರಂಜನಿ ಸಾಮಗ ಉಪಸ್ಥಿತರಿದ್ದರು.