ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರದ ಕೆಂಜೂರು ಮತ್ತು ವಾರಂಬಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿನ್ನೆ ಸುರಿದ ಭಾರೀ ಗಾಳಿ ಮಳೆಗೆ ಹಾಗೂ ಮರ ಬಿದ್ದು ಮನೆ ಕುಸಿತವಾಗಿರುವ ಸ್ಥಳಗಳಿಗೆ ಉಡುಪಿ ಶಾಸಕರಾದ ಯಶ್ ಪಾಲ್ ಸುವರ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೆಂಜೂರು ಗ್ರಾಮದ ಗೋಪಾಲ ನಾಯ್ಕ, ದಾಮೋದರ ನಾಯ್ಕ್ ಹಾಗೂ ವಾರಂಬಳ್ಳಿ ಗ್ರಾಮದ ಕಿಣಿಯರಬೆಟ್ಟುವಿನಲ್ಲಿ ಮರಬಿದ್ದು ಹಾನಿಗೀಡಾದ ಗಿರಿಜಾ ಮತ್ತು ಯಶೋಧ ಅವರ ಮನೆಗೆ ಭೇಟಿ ನೀಡಿ ಘಟನೆಯಿಂದ ಗಾಯಗೊಂಡವರ ಆರೋಗ್ಯ ವಿಚಾರಿಸಿ ವೈಯುಕ್ತಿಕ ನೆಲೆಯಲ್ಲಿ ಪರಿಹಾರ ನೀಡಿದರು.

ಸ್ಥಳದಲ್ಲಿಯೇ ತಹಶೀಲ್ದಾರ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಮಳೆ ಹಾನಿಯಿಂದ ಉಂಟಾದ ಹಾನಿಯ ಬಗ್ಗೆ ತಕ್ಷಣ ವರದಿ ಮಾಡಿ ಪ್ರಾಕೃತಿಕ ವಿಕೋಪದಡಿ ಗರಿಷ್ಟ ಪರಿಹಾರ ಒದಗಿಸುವಂತೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ವಾರಂಬಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ನಿತ್ಯಾನಂದ, ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಬಿರ್ತಿ, ಸ್ಥಳೀಯ ಮುಖಂಡರಾದ ನಿರಂಜನ್ ಶೆಟ್ಟಿ, ನಿಶಾನ್ ರೈ, ಆದರ್ಶ್ ಶೆಟ್ಟಿ ಕೆಂಜೂರು, ನಾಗೇಶ್ ನಾಯ್ಕ್, ರಮಾನಂದ ಶೆಟ್ಟಿ, ಉಷಾ ಪೂಜಾರಿ, ವಿನುತ್ ಶೆಟ್ಟಿ, ಹರೀಶ್ ಶೆಟ್ಟಿ ಕೆಂಜೂರು, ಲಕ್ಷ್ಮೀ ನಾರಾಯಣ್ ಮಲ್ಯ, ರವೀಂದ್ರ ಪೂಜಾರಿ, ಸುರೇಶ್ ನಾಯ್ಕ್, ಪುನೀತ್ ನಾಯ್ಕ್, ಸುರೇಂದ್ರ ನಾಯ್ಕ್ , ನಾಗರಾಜ್ ಕುಲಾಲ್, ವಿಜಯೇಂದ್ರ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.












