ಆರೋಗ್ಯ ತಪಾಸಣೆ, ಜೀವನ ಶೈಲಿಯಲ್ಲಿನ ಸಕಾರಾತ್ಮಕ ಬದಲಾವಣೆಗಳಿಂದ ಶೇ. 80ಕ್ಕಿಂತಲೂ ಹೆಚ್ಚು ಹೃದ್ರೋಗಗಳನ್ನು ತಡೆಯಲು ಸಾಧ್ಯ- ಖ್ಯಾತ ಹೃದ್ರೋಗ ತಜ್ಞರಾದ ಡಾ. ರಂಜನ್ ಶೆಟ್ಟಿ

ಉಡುಪಿ: ಯುವಕರಲ್ಲಿ ಹೆಚ್ಚುತ್ತಿರುವ ಹೃದಯಾಘಾತದ ಪ್ರಮಾಣವು ತೀವ್ರ ಕಳವಳಕಾರಿ ಸಂಗತಿಯಾಗಿದೆ. ನಮ್ಮ ದೇಶದಲ್ಲಿ ಹೃದಯಾಘಾತಕ್ಕೆ ತುತ್ತಾಗುವವರಲ್ಲಿ ಶೇ. 50ರಷ್ಟು ಮಂದಿ 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂಬುದು ಆಘಾತಕಾರಿ. ಆದರೆ, ಸಕಾಲಿಕ ಆರೋಗ್ಯ ತಪಾಸಣೆ ಮತ್ತು ಜೀವನಶೈಲಿಯಲ್ಲಿನ ಸಕಾರಾತ್ಮಕ ಬದಲಾವಣೆಗಳಿಂದ ಶೇ. 80ಕ್ಕಿಂತಲೂ ಹೆಚ್ಚು ಹೃದ್ರೋಗಗಳನ್ನು ಖಂಡಿತವಾಗಿಯೂ ತಡೆಯಲು ಸಾಧ್ಯವಿದೆ ಎಂದು ಸ್ಪರ್ಶ್ ಆಸ್ಪತ್ರೆಯ ಖ್ಯಾತ ಹೃದ್ರೋಗ ತಜ್ಞರಾದ ಡಾ. ರಂಜನ್ ಶೆಟ್ಟಿ ಹೇಳಿದರು.

ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 20ರಿಂದ 30 ಅಥವಾ 40ನೇ ವಯಸ್ಸಿನಲ್ಲಿಯೇ ಈ ಮುನ್ನೆಚ್ಚರಿಕಾ ಕ್ರಮಗಳನ್ನು ಅಳವಡಿಸಿಕೊಂಡರೆ, ಭವಿಷ್ಯದಲ್ಲಿ ಎದುರಾಗಬಹುದಾದ ಹೃದಯ ಸಂಬಂಧಿ ಸಮಸ್ಯೆಗಳ ಅಪಾಯವನ್ನು ದೊಡ್ಡ ಮಟ್ಟದಲ್ಲಿ ತಗ್ಗಿಸಬಹುದು ಎಂದರು.