ಉಡುಪಿ: ಜುಲೈ 10, ಆಷಾಡ ಮಾಸದ ಹುಣ್ಣಿಮೆಯ ವಿಶೇಷ ‘ಗುರು ಪೂರ್ಣಿಮಾ’ ದಿನ. ಈ ದಿನವನ್ನು ಸಾರ್ವಜನಿಕವಾಗಿ ವಿವಿಧ ಸಂಘ-ಸಂಸ್ಥೆಯವರು ‘ಶ್ರೀ ಗುರು ಪೂರ್ಣಿಮಾ ಉತ್ಸವ’ವನ್ನಾಗಿ ಆಚರಿಸುತ್ತಾರೆ.
ಪಕ್ಷದ ಸೂಚನೆಯಂತೆ ಇಂದು ಜಿಲ್ಲೆಯಾದ್ಯಂತ ಪ್ರತಿ ಗ್ರಾಮದಲ್ಲಿ ಗುರುಗಳನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮ ನಡೆಯುತ್ತಿದೆ. ಅದರಂತೆ ಆತ್ರಾಡಿ ಗ್ರಾಮದ ಕಾರ್ನಿಕ ಶಕ್ತಿ ಬೊಬ್ಬರ್ಯ ದೈವಸ್ಥಾನದ ದರ್ಶನ ಪಾತ್ರಿಗಳಾದ ಅಶೋಕ್ ಕಾಂಚನ್ ಅವರನ್ನು ಸಾರ್ವಜನಿಕ ಗಣೇಶೋತ್ಸವ ಸಮಿತಿ ಆತ್ರಾಡಿ ಇದರ ಅಧ್ಯಕ್ಷರಾದ ರಾಮದಾಸ್ ನಾಯಕ್, ಹಿರಿಯರಾಧ ನಿವೃತ್ತ ಉಪನ್ಯಾಸಕ ಮುರಳೀಧರ ಹಾಲಂಬಿ, ಅಯ್ಯಪ್ಪ ಸ್ವಾಮಿ ಮಂದಿರ ಮದಗದ ಮೊಕ್ತೇಸರ ರಾದ ಸಾಧು ಪೂಜಾರಿ ಮದಗ ಇವರೆಲ್ಲರ ಉಪಸ್ಥಿಯಲ್ಲಿ ಮಂಗಳಾರತಿ ಯೊಂದಿಗೆ ಸನ್ಮಾನಿಸಲಾಯಿತು.

ಅಶೋಕ್ ಕಾಂಚನ್ ಅತ್ರಾಡಿ ಅವರು ಬಹಳ ಹಿಂದಿನಿಂದಲೂ ಸನಾತನ ಹಿಂದೂ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಬಂದಿರುವ ಸಂಪ್ರದಾಯಸ್ಥ ಕುಟುಂಬದವರಾಗಿದ್ದಾರೆ. ಇವರು ತಮ್ಮ ತಂದೆ ದಿ.ಬೇಚ ಕಾಂಚನ್ ರವರು ಕಲಿಸಿಕೊಟ್ಟ ಭಜನೆಯ ಸಂಸ್ಕಾರವನ್ನು ಇಂದಿಗೂ ನಡೆಸಿಕೊಂಡು ಬಂದಿರುತ್ತಾರೆ. ಒಂದು ಭಜನಾ ಮಂಡಳಿಯನ್ನು ರಚಿಸಿಕೊಂಡು ವಿವಿಧ ಕಡೆಗಳಲ್ಲಿ ಭಜನಾ ಕಾರ್ಯಕ್ರಮಗಳನ್ನು ನಡೆಸಿಕೊಂಡುಬಂದಿರುತ್ತಾರೆ. ಶಾಲಾ ಮಕ್ಕಳಿಗೆ ವಾರದಲ್ಲಿ 1 ಗಂಟೆ ಕುಣಿತದ ಭಜನೆಯ ತರಬೇತಿಯನ್ನು ಹಲವು ವರ್ಷಗಳಿಂದ ನೀಡುತ್ತಾ ಬಂದಿರುವ ಭಜನಾ ಗುರುಗಳೂ ಆಗಿರುತ್ತಾರೆ. ವೃತ್ತಿಯಲ್ಲಿ ಅಂಚೆಯ ಅಣ್ಣನಾಗಿರುವ ಇವರು ಸಾಮಾಜಿಕ ಕಾರ್ಯದಲ್ಲಿ ಗುರುತಿಸಿ ಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಸತ್ಯಾನಂದ ನಾಯಕ್ ಆತ್ರಾಡಿ, ಮಾಜಿ ಪಂಚಾಯತ್ ಅಧ್ಯಕ್ಷರಾದ ರತ್ನಾಕರ್ ಶೆಟ್ಟಿ, ಪ್ರಮೀಳಾ ಶೆಟ್ಟಿಗಾರ್, ಉಪಾಧ್ಯಕ್ಷರು ಶಾರದಾ ಶೆಟ್ಟಿಗಾರ್, ಸದಸ್ಯರಾದ ಗಂಗಾಧರ್ ಪ್ರಭು ಜಡ್ಡು, ಹರಿಣಿ ಶೆಟ್ಟಿ ಪ್ರಮುಖರಾದ ಬಾಲಕೃಷ್ಣ ಹೆಗ್ಡೆ ಬೀರ್ಬೇಟ್ಟು, ಸದಾಶಿವ ನಾಯಕ್, ಸಂತೋಷ್ ಪೂಜಾರಿ, ಶ್ರೀಧರ್ ಶೆಟ್ಟಿಗಾರ್, ರಾಜೀವ ಕರ್ಕೇರ,ಕುಸುಮ ನಾಯಕ್, ಜಯಶ್ರೀ ಹಾಲoಬಿ, ಮಾಲತಿ ಶೆಟ್ಟಿಗಾರ್, ರತ್ನವತಿ ಶೆಟ್ಟಿಗಾರ್, ಸುಜಾತಾ, ಮೋಹಿನಿ, ಶೋಭಾ, ಶರಣ್ಯ, ಶ್ರವಣ್ ಕಾಂಚನ್ ಮತ್ತು ಭಜನಾ ತಂಡದ ಸದಸ್ಯರು ಉಪಸ್ಥಿತರಿದ್ದರು.












