ಉಡುಪಿ:ಗೃಹಲಕ್ಷ್ಮೀ ಡಿಜಿಟಲ್ ಮಾರ್ಕೆಟಿಂಗ್ ಆ್ಯಪ್ ಬಿಡುಗಡೆ


ಉಡುಪಿ: ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮವು ಗೃಹಲಕ್ಷಿö್ಮ ಡಿಜಿಟಲ್ ಆ್ಯಪ್ ಅನ್ನು ಬಿಡುಗಡೆ ಮಾಡಿದ್ದು, https://gruhalakshmidigital.org ವೆಬ್ ಸೈಟ್ ನಲ್ಲಿ ಮಹಿಳಾ ಉದ್ದಿಮೆದಾರರು ಉಚಿತವಾಗಿ ತಾವು ತಯಾರಿ/ವ್ಯಾಪಾರ ಮಾಡುವ ಉದ್ಯಮದ ಉತ್ಪನ್ನಗಳ ಮಾಹಿತಿಯನ್ನು ಹಂಚಿಕೊಳ್ಳಬಹುದಾಗಿದ್ದು ಮಹಿಳಾ ಉದ್ದಿಮೆದಾರರು ತಮ್ಮ ವೈಯಕ್ತಿಕ ವಿವರದೊಂದಿಗೆ ಉತ್ಪನ್ನಗಳ ಫೋಟೋಗಳನ್ನು ಸಲ್ಲಿಸಿ ತಮ್ಮ ವಹಿವಾಟುಗಳನ್ನು ಹೆಚ್ಚಿಸಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ಅಭಿವೃದ್ದಿ ನಿರೀಕ್ಷಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದಿ ನಿಗಮದ ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣ, 1 ನೇ ಮಹಡಿ, ಬಿ ಬ್ಲಾಕ್ ರೂ.ನಂ204 ಮಣಿಪಾಲ ಅಥವಾ ಆಯಾ ತಾಲೂಕು ಶಿಶು ಅಭಿವೃದ್ದಿ ಯೋಜನಾಧಿಕಾರಿಗಳನ್ನು ಸಂಪರ್ಕಿಸಬಹುದುü ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಕಚೇರಿ ಪ್ರಕಟಣೆ ತಿಳಿಸಿದೆ.