ಉಡುಪಿ: ನೂತನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಸ್ವಂತ ಕಟ್ಟಡ “ಸಹಕಾರ ಸಾನಿಧ್ಯ” ಅದ್ದೂರಿ ಉದ್ಘಾಟನೆ.

ಉಡುಪಿ: ನೂತನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ (ನಿ.) ಉಡುಪಿ ಇದರ ನೂತನ ಸ್ವಂತ ಕಟ್ಟಡ “ಸಹಕಾರ ಸಾನಿಧ್ಯ” ಉದ್ಘಾಟನಾ ಸಮಾರಂಭವು ಡಿ.14 ರಂದು ಅಜ್ಜರಕಾಡು, ಟೀಚರ್ ಟ್ರೈನಿಂಗ್ ಸ್ಕೂಲ್ ಬಳಿ ಅದ್ದೂರಿಯಾಗಿ ನಡೆಯಿತು.

ನೂತನ ಕಟ್ಟಡದ ಉದ್ಘಾಟನೆಯನ್ನು ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ, ಶ್ರೀ ಅದಮಾರು ಮಠ ಉಡುಪಿ ಇವರು ನೆರವೇರಿಸಿದರು.

ಭದ್ರತಾ ಕೊಠಡಿಯ ಉದ್ಘಾಟನೆಯನ್ನು ಯ‌ಶ್‌ಪಾಲ್ ಸುವರ್ಣ ಶಾಸಕರು, ಉಡುಪಿ ವಿಧಾನಸಭಾ ಕ್ಷೇತ್ರ, ಇವರು ನೆರವೇರಿಸಿದರು.

ನೂತನಾಮೃತ ನಿಧಿ ಚಾಲನೆಯನ್ನು ಪ್ರಮೋದ್ ಮಧ್ವರಾಜ್ ಮಾಜಿ ಸಚಿವರು, ಕರ್ನಾಟಕ ಸರಕಾರ ಇವರು ನಡೆಸಿದರು.

ಉದ್ಘಾಟನಾ ಸಮಾರಂಭದ ದಿವ್ಯ ಉಪಸ್ಥಿತಿಯಲ್ಲಿ ವಂದನೀಯ ರೆ| ಫಾ|ಲಿಯೋ ಪ್ರಕಾಶ್ ಡಿಸೋಜ ಸಹಾಯಕ ಧರ್ಮ ಗುರುಗಳು, ಮದರ್ ಆಫ್ ಸಾರೋಸ್ ಚರ್ಚ್, ಇವರು ಇದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಸುಮಿತ್ರ ಆರ್. ಅಧ್ಯಕ್ಷರು ನೂತನ್ ಕ್ರೆಡಿಟ್ ಕೋ ಆಪರೇಟರ್ ಸೊಸೈಟಿ ಇವರು ವಹಿಸಿದರು.

ಜಯಕರ ಶೆಟ್ಟಿ, ಇಂದ್ರಾಳಿ ಅಧ್ಯಕ್ಷರು, ಜಿಲ್ಲಾ ಸಹಕಾರ ಯೂನಿಯನ್, ಪ್ರಸಾದ್‌ರಾಜ್ ಕಾಂಚನ್, ಎಂ. ಡಿ. ಕಾಂಚನ್ ಹುಂಡೈ ಪ್ರೈ.ಲಿ.,ಶ್ರೀಮತಿ ಲಾವಣ್ಯ ಕೆ. ಆ‌ರ್., ಸಹಕಾರ ಸಂಘಗಳ ಉಪ ನಿರ್ದೇಶಕರು ಉಡುಪಿ, ಜೆ. ಸುಧೀರ್ ಕುಮಾರ್, ಸಹಕಾರ ಸಂಘಗಳ ಸಹಾಯಕ ನಿರ್ದೇಶಕರು ಕುಂದಾಪುರ, ಬ್ಯಾಪ್ಟಿಸ್ ಡಯಾಸ್, ಉಪಾಧ್ಯಕ್ಷರು, ನೂತನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ, ಗಣೇಶ್ ಶೇರಿಗಾರ್ ಪ್ರಧಾನ ವ್ಯವಸ್ಥಾಪಕರು, ನೂತನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ, ಅಶ್ವಿನ್ ಕೆ. ವಿ., ಶಾಲಾ ವ್ಯವಸ್ಥಾಪಕರು, ನೂತನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

ಸುವರ್ಣ ಕರ್ನಾಟಕ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಕನ್ನಡ, ತುಳು ಚಲನಚಿತ್ರ ಹಿನ್ನಲೆ ಗಾಯಕ ರವೀಂದ್ರ ಪ್ರಭು ಮತ್ತು ಬಳಗದವರಿಂದ “ರಾಗ್ ರಂಗ್” ಸಂಗೀತ ರಸ ಮಂಜರಿ ಕಾರ್ಯಕ್ರಮ ನಡೆಯಿತು.