ಉಡುಪಿ: ಬಂಟಕಲ್ನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ 13ನೇ “ಪದವಿ ಪ್ರದಾನ” ಸಮಾರಂಭವು ದಿನಾಂಕ 11 ಅಕ್ಟೋಬರ್ 2026 ಭಾನುವಾರದಂದು ಕಾಲೇಜಿನ ಆವರಣದಲ್ಲಿ ನಡೆಯಿತು.
ದಾವಣಗೆರೆ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿಗಳಾದ ಡಾ. ಬಿ ಇ ರಂಗಸ್ವಾಮಿಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ವಿದ್ಯಾರ್ಥಿಗಳ ಸಾಧನೆಯಲ್ಲಿ ಪೋಷಕರ ಮತ್ತು ಶಿಕ್ಷಕ ವರ್ಗದಕೊಡುಗೆಯನ್ನು ಶ್ಲಾಘಿಸಿದರು.
ಶಿಕ್ಷಣವು ಉಜ್ವಲ ಭವಿಷ್ಯದ ಅಡಿಪಾಯ ಎಂದು ತಿಳಿಸಿದ ಅವರು ನಾವೀನ್ಯತೆ, ಉದಯಮಶೀಲತೆ ಮತ್ತು ಸ್ಟಾರ್ಟ್ ಅಪ್ ಇಂಡಿಯಾ ಯೋಜನೆಯ ಅವಕಾಶಗಳನ್ನು ಬಳಸಿಕೊಳ್ಳುವಂತೆಪದವೀಧರರಿಗೆ ಕರೆ ನೀಡಿದರು. ದೊಡ್ಡ ಕನಸಿನೊಂದಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಿ ಯಶಸ್ವಿ ವೃತ್ತಿ ಜೀವನವನ್ನು ರೂಪಿಸಿಕೊಂಡು ಸಮಾಜಕ್ಕೆ ಅರ್ಥಪೂರ್ಣ ಕೊಡುಗೆ ನೀಡುವಂತೆ ಸಲಹೆ ನೀಡಿದರು.

ಗೌರವ ಅತಿಥಿಗಳಾಗಿ ಧಾರವಾಡದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ(ಐಐಟಿ)ಯ ನಿರ್ದೇಶಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಇವರು ಪದವೀಧರರನ್ನು ಅವರ ವೃತ್ತಿಜೀವನದ ಮಹತ್ವದ ಮೈಲಿಗಲ್ಲಿಗಾಗಿ ಅಭಿನಂದಿಸಿದರು. ನೈಜ ಜಗತ್ತಿನ ಸಮಸ್ಯೆಗಳಿಗೆ ಪರಿಣಾಮಕಾರಿ ಪರಿಹಾರಗಳನ್ನು ಕಂಡುಕೊಳ್ಳಲು ನಿರಂತರ ಕಲಿಕೆ, ಸಂಸೋಧನೆ ಮತ್ತು ನಾವೀನ್ಯತೆ ಅಗತ್ಯವೆಂದು ತಿಳಿಸಿದರು.
ಅಲ್ಲದೆ, “ಕಡಿಮೆ ಬಳಕೆ, ಮರುಬಳಕೆ ಮತ್ತು ಮರುಸಂಸ್ಕರಣೆ” ತತ್ವಗಳನ್ನು ಅಳವಡಿಸಿಕೊಳ್ಳುವಂತೆ ಹಾಗೂ ಸುಸ್ಥಿರ ಅಭಿವೃದ್ದಿ, ನೈತಿಕ ಮೌಲ್ಯಗಳು ಮತ್ತು ಸಮಾಜದ ಪ್ರಗತಿಗೆ ಆದ್ಯತೆ ನೀಡುವಂತೆ ಪದವೀಧರರಿಗೆ ಕರೆ ನೀಡಿದರು.
ಶ್ರೀ ಸೋದೆ ವಾದಿರಾಜ ಮಠದ ಪರಮ ಪೂಜ್ಯ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿಯವರು ಅಧ್ಯಕ್ಷತೆ ವಹಿಸಿದ್ದರು.ಇವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಪ್ರಾಮಾಣಿಕತೆ, ನೈತಿಕ ಮೌಲ್ಯಗಳು, ಸಾಮಾಜಿಕ ಜವಾಬ್ದಾರಿ, ನಿರಂತರ ಕಲಿಕೆ ಹಾಗೂ ಯಶಸ್ಸು ಮತ್ತು ವೈಫಲ್ಯಗಳನ್ನು ಧೈರ್ಯದಿಂದ ಎದುರಿಸುವ ಮಹತ್ವವನ್ನು ತಿಳಿಸಿದರು.
ಪದವೀಧರರುಸಮಾಜದ ಉನ್ನತಿಗೆ ಶ್ರಮಿಸುವಂತೆ, ಪೋಷಕರ ತ್ಯಾಗ ಮತ್ತು ಶಿಕ್ಷಕರ ಸಮರ್ಪಣೆಯನ್ನು ಸ್ಮರಿಸುವಂತೆ ಕರೆನೀಡಿ ಪದವೀಧರರ ಉಜ್ವಲ ಹಾಗೂ ಅರ್ಥಪೂರ್ಣ ಭವಿಷ್ಯಕ್ಕಾಗಿ ಆಶೀರ್ವದಿಸಿರು.
ಕಾರ್ಯದಶಿಗಳಾದ ರತ್ನಕುಮಾರ್ ಇವರು ಪದವೀಧರರನ್ನು ಅಭಿನಂದಿಸುತ್ತಾ ಯಶಸ್ಸು ಮತ್ತು ವೈಫಲ್ಯಗಳನ್ನು ಜೀವನದ ಅವಿಭಾಜ್ಯ ಅಂಗಗಳಾಗಿ ಸ್ವೀಕರಿಸುವ ಮಹತ್ವವನ್ನು ತಿಳಿಸಿದರು.
ಪದವೀಧರರು ಆತ್ಮವಿಶ್ವಾಸ, ದೃಢ ಸಂಕಲ್ಪ ಮತ್ತು ಸಕಾರಾತ್ಮಕ ಮನೋಭಾವದಿಂದ ಸವಾಲುಗಳನ್ನು ಎದುರಿಸುವುದರ ಜೊತೆಗೆ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಭಾರತೀಯ ಸಾಂಸ್ಕೃತಿಕ ಮೌಲ್ಯಗಳನ್ನು ಉಳಿಸಿ ಬೆಳೆಸುವಂತೆ ಪ್ರೋತ್ಸಾಹಿಸಿದರು.
ಈ ಸಂದರ್ಭದಲ್ಲಿ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಮತ್ತು ಡಾಟಾ ಸೈನ್ಸ್ ವಿಭಾಗದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 2025-26ನೇ ಸಾಲಿನಲ್ಲಿ ನಾಲ್ಕನೇ ರ್ಯಾಂಕ್ ಪಡೆದ ಕುಮಾರಿ ಸಿಂಚನ ಇವರನ್ನು ಸನ್ಮಾನಿಸಲಾಯಿತು. ಮಂಗಳೂರಿನ ಪ್ರತಿಷ್ಠಿತ ಎಸ್. ಎಲ್. ಶೇಟ್ ಜ್ಯುವೆಲ್ಲರ್ಸ್ ಇವರಿಂದ ಪ್ರಾಯೋಜಿತವಾದ ಚಿನ್ನದ ಪದಕಗಳನ್ನು ಪೂಜ್ಯ ಸ್ವಾಮೀಜಿಯವರು ಸಿಂಚನ, ಕೀರ್ತಿ, ಎಮ್ ಶಫಾಜ್ ಎ ಆರ್, ಹರ್ಷಿತ್ ರಾಜು,ಅನ್ನಪೂರ್ಣ ಶೆಣೈ, ವಿಕಾಸ್, ರಕ್ಷಾ ಸುಬ್ರಮಣ್ಯ ಶೆಟ್ಟಿ ಇವರ ಶೈಕ್ಷಣಿಕ ಸಾಧನೆಗಾಗಿ ನೀಡಿ ಆಶೀರ್ವದಿಸಿದರು.
ಪ್ರಾಂಶುಪಾಲರಾದ ಡಾ. ನಾಗರಾಜ್ ಭಟ್ ಅತಿಥಿಗಳನ್ನು ಸ್ವಾಗತಿಸಿದರು.
ಆಡಳಿತ ಮಂಡಳಿಯ ಸದಸ್ಯರಾದ ಡಾ. ಗುರುರಾಜ್ ಕಿದಿಯೂರ್, ಹರೀಶ್ ಬೆಳ್ಮಣ್, ಪ್ರೊ. ಬಿ ಎಸ್ ರೆವಣಕರ್, ಶ್ಯಾಮ ಸುಂದರ್, ನಂದಕುಮಾರ್ ಉಪಾಧ್ಯಾಯ, ಡೀನ್ಗಳಾದ ಡಾ. ಸುದರ್ಶನ್ ರಾವ್, ಡಾ.ನಾಗರಾಜ್ ಭಟ್, ಡಾ. ಸಚಿನ್ ಭಟ್ ಮತ್ತು ವಿವಿಧ ವಿಭಾಗಗಳ ಮುಖ್ಯಸ್ಥರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಾಧ್ಯಾಪಕಿಯಾದ ಡಾ. ಸುಬ್ಬುಲಕ್ಷ್ಮಿ ಎನ್ ಕಾರಂತ್ ಇವರು ಮುಖ್ಯ ಅತಿಥಿಗಳನ್ನು ಹಾಗೂ ಡಾ. ಲೊಲಿಟ ಪ್ರಿಯ ಕ್ಯಾಸ್ತಲಿನೊ ಇವರು ಗೌರವ ಅತಿಥಿಗಳನ್ನು ಪರಿಚಯಿಸಿದರು. ಡಾ. ಸುದರ್ಶನ್ ರಾವ್ ಅವರುಪದವೀಧರರಿಗೆ ಪ್ರಮಾಣವಚನ ಭೋದಿಸಿದರು. ಡಾ. ಸೌಮ್ಯ ಜೆ ಭಟ್ ವಿವಿಧ ವಿಭಾಗಗಳಲ್ಲಿ ರ್ಯಾಂಕ್ ವಿಜೇತರ ಪಟ್ಟಿ ವಾಚಿಸಿದರು. ಡಾ. ಸಚಿನ್ ಎಸ್ ಭಟ್ ವಂದಿಸಿದರು.
ವಿದ್ಯಾರ್ಥಿ ಶರಣ್ಯ ತಂತ್ರಿ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಪ್ರಾಧ್ಯಾಪಕರಾದ ಶ್ರೀಮತಿ ಸಹನ ಎಸ್ ಆರ್ ಮತ್ತು ಡಾ. ಪುನೀತ್ ಬೇಕಲ್ ನಿರೂಪಿಸಿದರು.















