ಉಡುಪಿ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆತ್ರಾಡಿ; ವಾರ್ಷಿಕೋತ್ಸವ ಸಂಭ್ರಮ

ಉಡುಪಿ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆತ್ರಾಡಿ ಇದರ ವಾರ್ಷಿಕೋತ್ಸವ ಸಂಭ್ರಮ ನಡೆಯಿತು. ಬೆಳಿಗ್ಗೆ ಧ್ವಜಾರೋಹಣವನ್ನು SDMC ಅಧ್ಯಕ್ಷೆ ಶ್ರೀಮತಿ ಸಬೀನಾರವರು, ಅಧ್ಯಕ್ಷತೆಯನ್ನು ಪರ್ಕಳ ಪ್ರೌಢಶಾಲಾ ಸಂಚಾಲಕರಾದ ದಿನೇಶ್ ಹೆಗ್ಡೆ ಆತ್ರಾಡಿ ಇವರು ನೆರವೇರಿಸಿದರು. ನಂತರ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವನ್ನು ವಿತರಿಸಲಾಯಿತು.

ವೇದಿಕೆಯಲ್ಲಿ SDMC ಮಾಜಿ ಅಧ್ಯಕ್ಷರುಗಳಾದ ಶ್ರೀಮತಿ ಶ್ಯಾಮಲಾ ಪ್ರಭು, ಅಬ್ದುಲ್ ರಹಿಮಾನ್, ಹಳೆ ವಿದ್ಯಾರ್ಥಿ ಅಶೋಕ್ ಕಾಂಚನ್, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಇಸ್ಮಾಯಿಲ್ ಆತ್ರಾಡಿ, ಪಂಚಾಯತ್ ಮಾಜಿ ಅಧ್ಯಕ್ಷೆ ಶ್ರೀಮತಿ ರೂಪ ಶೆಟ್ಟಿ, ಸದಸ್ಯರಾದ ಶ್ರೀಮತಿ ಪ್ರತಿಮಾ ನಾಯ್ಕ್,ಮುಖ್ಯ ಶಿಕ್ಷಕಿ ಶ್ರೀಮತಿ ಸರಸ್ವತಿ ಎನ್, ಅಂಗನವಾಡಿ ಶಿಕ್ಷಕಿ ಶ್ರೀಮತಿ ಜಯಂತಿ, ವಿದ್ಯಾರ್ಥಿ ನಾಯಕ ಮಾ. ಸಮರ್ಥ್ ಮುಂತಾದವರು ಉಪಸ್ಥಿತರಿದ್ದರು.

ಸಂಜೆಯ ಸಭಾ ಕಾರ್ಯಕ್ರಮವು ಪಂಚಾಯತ್ ಅಧ್ಯಕ್ಷರಾದ ಹರೀಶ್ ಶೆಟ್ಟಿ ಇವರ ಅದ್ಯಕ್ಷತೆಯಲ್ಲಿ ಜರಗಿತು. ವೇದಿಕೆಯಲ್ಲಿ ಉಡುಪಿ ರಂಗಭೂಮಿ ಕಾರ್ಯದರ್ಶಿ ಪ್ರದೀಪ್ ಚಂದ್ರ ಕುತ್ಪಾಡಿ, ಹಿರಿಯಡ್ಕ ಲಯನ್ಸ್ ಅಧ್ಯಕ್ಷರಾದ ರಘುವೀರ್ ಶೆಟ್ಟಿಗಾರ್, ಪ್ರಖ್ಯಾತ ವೈದ್ಯರಾದ ಡಾ. ಸತೀಶ್ ಶೆಟ್ಟಿ, ಆತ್ರಾಡಿ ಕ್ಲಸ್ಟರ್ ನ ಸಮೂಹ ಸಂಪನ್ಮೂಲ ವ್ಯಕ್ತಿ ಪ್ರದೀಪ್ ಕುಮಾರ್, SDMC ಅಧ್ಯಕ್ಷೆ ಶ್ರೀಮತಿ ಸಬೀನಾ, ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಶಾರದಾ ಶೆಟ್ಟಿಗಾರ್, ಸ್ಥಳೀಯ ವಾರ್ಡ್ ಪಂಚಾಯತ್ ಸದಸ್ಯರಾದ ಗಂಗಾಧರ್ ಪ್ರಭು, ಶ್ರೀಮತಿ ಹರಿಣಿ ಶೆಟ್ಟಿ, ಪಂಚಾಯತ್ ಮಾಜಿ ಅಧ್ಯಕ್ಷೆ ಶ್ರೀಮತಿ ರೂಪ ಶೆಟ್ಟಿ, ಸದಸ್ಯರಾದ ಇಸ್ಮಾಯಿಲ್ ಆತ್ರಾಡಿ, ಶ್ರೀಮತಿ ಪ್ರತಿಮಾ ನಾಯ್ಕ್, ಹಳೆ ವಿದ್ಯಾರ್ಥಿ ಸಂಘದ ಸ್ಥಾಪಕ ಅಧ್ಯಕ್ಷರಾದ ಸೈಮಕಾಂತ್ ಶೆಟ್ಟಿ, ಲಯನ್ಸ್ ಜಿಲ್ಲಾ ಕ್ಯಾಬಿನೆಟ್ ಸದಸ್ಯರಾದ ಹರೀಶ್ ಹೆಗ್ಡೆ, ಮುಖ್ಯ ಶಿಕ್ಷಕಿ ಶ್ರೀಮತಿ ಸರಸ್ವತಿ ಎನ್, ಅಂಗನವಾಡಿ ಶಿಕ್ಷಕಿ ಶ್ರೀಮತಿ ಜಯಂತಿ, ವಿದ್ಯಾರ್ಥಿ ನಾಯಕ ಮಾಸ್ಟರ್ ಸಮರ್ಥ್ ಮುಂತಾದವರು ಉಪಸ್ಥಿತರಿದ್ದರು.

ಮೊದಲಿಗೆ ಶಾಲಾ ಮಕ್ಕಳಿಂದ ಪ್ರಾರ್ಥನೆ ನಡೆಯಿತು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸತ್ಯಾನಂದ ನಾಯಕ್ ಆತ್ರಾಡಿ ಇವರು ಎಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ಮಾತನ್ನಾಡಿದರು. ಮುಖ್ಯಶಿಕ್ಷಕಿ ಶ್ರೀಮತಿ ಸರಸ್ವತಿ ಎನ್ ಇವರು ಕಳೆದ ಎರಡು ವರ್ಷಗಳ ಶಾಲಾ ವರದಿ ವಾಚನ ಮಾಡಿದರು. ಹಳೆ ವಿದ್ಯಾರ್ಥಿ ಸಂಘದ ವರದಿ ಯನ್ನು ಕಾರ್ಯದರ್ಶಿ ಇಸ್ಮಾಯಿಲ್ ರವರು ಮಾಡಿದರು. ನಂತರ ಕಲಿಯುವಿಕೆಯಲ್ಲಿ ಉತ್ತಮ ಸಾಧನೆ ಮಾಡಿರುವ ಮಕ್ಕಳಿಗೆ ನಗದು ಬಹುಮಾನವನ್ನು ನೀಡಲಾಯಿತು. ಬಹುಮಾನಿತರ ಹೆಸರುಗಳನ್ನು ಶಿಕ್ಷಕಿ ಶ್ರೀಮತಿ ಶಾರದಾರವರು ವಾಚಿಸಿದರು.

ಕಾರ್ಯಕ್ರಮದ ವಿಶೇಷ ಅತಿಥಿ ಉಡುಪಿ ರಂಗಭೂಮಿ ಸಂಚಾಲಕರು ಮತ್ತು 5 ತುಳು ಚಲನ ಚಿತ್ರ ಗಳಲ್ಲಿ ನಾಯಕ ನಟನಾಗಿ ಜತೆಗೆ 8 ಕನ್ನಡ ಚಲನ ಚಿತ್ರ ಗಳಲ್ಲಿ ಅಭಿನಯ ಮಾಡಿ ನಿನಗಾಗಿ, ನನ್ನರಸಿ ರಾಧೆ, ರಾಣಿ, ನಿಹಾರಿಕ, ಪ್ರೇಮ ಲೋಕ, ಮುಕ್ತ, ಒಲವೇ ಜೀವನ ಮುಂತಾದ 15 ಕ್ಕೂ ಹೆಚ್ಚಿನ ಕನ್ನಡ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರ ವಹಿಸಿ ಹಲವಾರು ಪ್ರಶಸ್ತಿ ಪಡೆದಿರುವ ಮೇರು ನಟ ಶ್ರೀ ಪ್ರದೀಪ್ ಚಂದ್ರ ಕುತ್ಪಾಡಿ ಇವರನ್ನು ಸನ್ಮಾನಿಸಲಾಯಿತು. ನಂತರ ಮಾತನಾಡಿದ ಪ್ರದೀಪ್ ಚಂದ್ರರವರು ದೊಡ್ಡ ದೊಡ್ಡ ಸಾಧನೆ ಗಳನ್ನು ಮಾಡಿ ದೇಶಕ್ಕೆ ಮಾದರಿಯಾಗಿರುವ ಮಹನೀಯರು ಸರಕಾರಿ ಶಾಲೆಯಲ್ಲಿ ಕಲಿತವರೇ ಆಗಿದ್ದಾರೆ. ಸರಕಾರಿ ಶಾಲೆಗಳಲ್ಲಿ ಸಂಸ್ಕಾರಯುತ ಶಿಕ್ಷಣ ದೊರೆಯುತ್ತಿದೆ. ರಂಗ ನಟನೆಯಿಂದ ಮೆದುಳು ಚುರುಕಾಗುತ್ತದೆ. ಇದು ನಮ್ಮೆಲ್ಲರ ಶಿಕ್ಷಣದಲ್ಲಿ ಸಾಧನೆ ಮಾಡಲು ಸಹಕಾರಿಯಾಗಿದೆ ಎಂದು ತಿಳಿಸಿದರು. ಸರಕಾರಿ ಶಾಲೆಗೆ ಮಹತ್ತರ ಕೊಡುಗೆ ನೀಡುತ್ತಿರುವ ಗ್ರಾಮಸ್ಥರನ್ನು ಕೊಂಡಾಡಿದರು.

ಕಳೆದ ಹಲವು ವರ್ಷಗಳಿಂದ ಶಾಲೆಗೆ ಉಚಿವಾಗಿ ತರಕಾರಿಯನ್ನು ನೀಡುತ್ತಿರುವ ಮತ್ತು ಜೈ ಹನುಮಾನ್ ಸಂಘ, ಗಣೇಶೋತ್ಸವ ಸಮಿತಿ, ಸವ್ಯ ಸಾಚಿ ಶಿಶು ಮಂದಿರ ಸಹಿತ ಹಲವಾರು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಗತಿ ಪರ ರೈತ, ಹಳೆ ವಿದ್ಯಾರ್ಥಿ ಶ್ರೀ ಲಕ್ಷ್ಮೀ ನಾರಾಯಣ ನಾಯಕ್, ಮತ್ತು ಸರಕಾರಿ ಶಾಲೆಯಲ್ಲಿ ಕಲಿತು ರಾಷ್ಟ್ರೀಯ ಮಟ್ಟದ ವೈದ್ಯಕೀಯ ನೀಟ್ ಪರೀಕ್ಷೆ ಯಲ್ಲಿ ಮತ್ತು JEE ಪರೀಕ್ಷೆ ಯಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಜತೆಗೆ ಅಥ್ಲೆಟಿಕ್, ಕ್ರಿಕೆಟ್, ಫೂಟ್ ಬಾಲ್ ಮುಂತಾದ ಕ್ರೀಡೆಗಳಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ ಆಗಿರುವ , ಕೃಷಿ ಚಟುವಟಿಕೆಯಲ್ಲಿ ಆಸಕ್ತಿ ಇರುವ ಹೆಮ್ಮೆಯ ಹಳೆ ವಿದ್ಯಾರ್ಥಿನಿ ಕುಮಾರಿ ಲತಾ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸನ್ಮಾನಿತರ ಸನ್ಮಾನ ಪತ್ರವನ್ನು ಮುಖ್ಯ ಶಿಕ್ಷಕಿ ಶ್ರೀಮತಿ ಸರಸ್ವತಿ ಎನ್ ಮತ್ತು ಶಿಕ್ಷಕಿ ಶ್ರೀಮತಿ ವಿಮಲಾರವರು ವಾಚಿಸಿದರು.

ನಂತರ ಅಂಗನವಾಡಿ, ಶಾಲಾ ಮಕ್ಕಳಿಂದ ಆಕರ್ಷಕ ನೃತ್ಯ ಕಾರ್ಯಕ್ರಮ ಜರಗಿತು. ಹಳೆ ವಿದ್ಯಾರ್ಥಿಗಳ ನೃತ್ಯ ಗಳು ಪ್ರದರ್ಶನ ಗೊಂಡವು. ಶಿಕ್ಷಕಿ ಶ್ರೀಮತಿ ಜ್ಯೋತಿಯವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಸರ್ವರಿಗೂ ಧನ್ಯವಾದವನ್ನಿತ್ತರು. ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕಿಯರಾದ ಶ್ರೀಮತಿ ಶಬಾನಾ ಪರ್ವೀನ್ ಶೇಖ್ ಮತ್ತು ಶ್ರೀಮತಿ ಸುಹಾಸಿನಿ ಯವರು ಅಚ್ಚುಕಟ್ಟಾಗಿ ನಿರ್ವಹಿಸಿದರು.

ಕೊನೆಯಲ್ಲಿ ಹಳೆವಿದ್ಯಾರ್ಥಿ ಗಳಿಂದ ” ಆರ್ ಕೊರ್ಪೆರ್ ” ತುಳು ಹಾಸ್ಯಮಯ ನಾಟಕ ಪ್ರದರ್ಶನ ಗೊಂಡಿತು. ಇದಕ್ಕೂ ಮುನ್ನ ನಾಟಕದ ಕತೆ ಬರೆದಿರುವ ಚಂದ್ರ ಶೇಖರ್ ಸರಳೆಬೆಟ್ಟು, ಸಂಗೀತ ಸಂಯೋಜನೆ ಮಾಡಿರುವ ರಾಜ್ಯ ಪ್ರಶಸ್ತಿ ವಿಜೇತ ಬರವುದ ಬೊಳ್ಳಿ ರಾಜೇಶ್ ಆಚಾರ್ಯ ಪರ್ಕಳ, ನಿರ್ದೇಶಕ ಜಿಲ್ಲಾ ಪ್ರಶಸ್ತಿ ವಿಜೇತ ಪಾಂಡುರಂಗ ಪ್ರಭು ಇವರುಗಳನ್ನು ಸನ್ಮಾನ ಮಾಡಲಾಯಿತು.