ಉಡುಪಿ:ಗೋಪಾಲಕೃಷ್ಣ ಮಂದಿರ, ಮುಂಡ್ಕಿನಜೆಡ್ಡು ಇದರ ಸುವರ್ಣ ಸಂಭ್ರಮದ ಪ್ರಯುಕ್ತ ಬಾಲಾಲಯದಲ್ಲಿ ದೇವರುಗಳ ಪ್ರತಿಷ್ಠಾಪನ ಕಾರ್ಯಕ್ರಮ

ಉಡುಪಿ:ಶ್ರೀ ಗೋಪಾಲಕೃಷ್ಣ ಮಂದಿರ, ಮುಂಡ್ಕಿನಜೆಡ್ಡು ಇದರ ಸುವರ್ಣ ಸಂಭ್ರಮದ ಪ್ರಯುಕ್ತ ಮಂದಿರದ ಸಮಗ್ರ ಜೀರ್ಣೋದ್ಧಾರದ ಪ್ರಾರಂಭಿಕ ಹಂತವಾಗಿ ದಿನಾಂಕ 3-11-2025ರ ಸೋಮವಾರ ಮಂದಿರದಲ್ಲಿನ ದೇವರುಗಳನ್ನು ಬಾಲಾಲಯದಲ್ಲಿ ಪ್ರತಿಷ್ಠಾಪಿಸುವ ಕಾರ್ಯಕ್ರಮ ಜರುಗಿತು.

ಈ ಸಂದರ್ಭದಲ್ಲಿ ಜೀರ್ಣೋದ್ಧಾರದ ಸಮಗ್ರ ಮನವಿ ಬಿಡುಗಡೆಗೊಳಿಸಲಾಯಿತು. ಲೋಗೋ ಅನಾವರಣಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಡಾ ಕೆ ಕೆ ಆಚಾರ್ಯ, ಶಶಿಕಲಾ ಕೆ ಆಚಾರ್ಯ, ಪುರುಷೋತ್ತಮ ಪ್ರಭು , ರಾಜೇಶ ಪಾಟೀಲ್, ಗೋಪಾಲಕೃಷ್ಣ ಆಚಾರ್ಯ, ರವಿಕುಮಾರ ಶೆಟ್ಟಿ, ರವಿರಾಜ ಭಟ್, ಅಶೋಕ ಸಾಮಂತ, ಸತೀಶ ಸಾಮಂತ, ಭರತ್ ಆಚಾರ್ಯ, ದಿಲೀಪ ಆಚಾರ್ಯ, ಬಾಲಕೃಷ್ಣ ಪ್ರಭು, ದೇವರಾಜ ಪ್ರಭು, ನಾರಾಯಣ ನಾಯ್ಕ, ನವೀನ ಆಚಾರ್ಯ , ಸಂತೋಷ ಕುಲಾಲ, ಊರಿನ ಭಕ್ತಾದಿಗಳು, ಶಿಕ್ಷಕರು ಉಪಸ್ಥಿತರಿದ್ದರು.