ಉಡುಪಿ:ರಾಜ್ಯ ಜುವೆಲರ್ಸ್ ಫೆಡರೇಶನ್ ಆ.1ರಿಂದ ಅ.5ರವರೆಗೆ ರಾಜ್ಯಾದ್ಯಂತ ಗೋಲ್ಡ್ ಫೆಸ್ಟಿವಲ್ ಆಯೋಜಿಸಿದ್ದು, ಈ ಬಗ್ಗೆ ಪೂರ್ವಭಾವಿ ಸಭೆ ಕಲ್ಲಂಕ ಬಳಿಯ ಓಶನ್ ಪರ್ಲ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
ಈ ಅವಧಿಯಲ್ಲಿ ಭಾಗವಹಿಸುವ ಎಲ್ಲ ಜುವೆಲರಿಗಳಲ್ಲಿ ಚಿನ್ನ ಬೆಳ್ಳಿ ಖರೀದಿಸುವ ಗ್ರಾಹಕರಿಗೆ ಕೂಪನ್‌ಗಳನ್ನು ನೀಡಲಾಗುತ್ತಿದೆ. ಅವುಗಳಿಗೆ 1 ಕೆಜಿ ಚಿನ್ನ 5 ಕೆಜಿ ಬೆಳ್ಳಿಯ ಬಂಪರ್ ಬಹುಮಾನ, 100 ವಜ್ರದ ಉಂಗುರ, 1 ವಜ್ರದ ನೆಕ್ಲಸ್ ಹಾಗೂ ಇನ್ನೂ ಹಲವು ಚಿನ್ನ ಬೆಳ್ಳಿಯ ಬಹುಮಾನಗಳು ಸೇರಿ ಸುಮಾರು 2 ಕೋಟಿಗೂ ಅಧಿಕ ಮೌಲ್ಯದ ಬಹುಮಾನಗಳಿರುತ್ತವೆ.
ರಾಜ್ಯ ಫೆಡರೇಶನ್ ಸ್ಥಾಪಕಾಧ್ಯಕ್ಷ ನೋವೆಲ್ಟಿ ಜಯ ಆಚಾರ್ಯ, ಮಂಗಳೂರು ಗೋಲ್ಡ್ ಫೆಸ್ಟಿವಲ್ ಸಂಚಾಲಕ ಎಸ್‌ಎಲ್ ಶೇಟ್ ಡೈಮಂಡ್ಸ್ ನ ಪ್ರಶಾಂತ್ ಶೇಟ್, ಉಡುಪಿ ಜುವೆಲರ್ಸ್ ಅಸೋಸಿಯೇಶನ್ ಅಧ್ಯಕ್ಷ ವಸಂತ ರಾವ್, ಉಪಾಧ್ಯಕ್ಷ ಮಂಜುನಾಥ ಶೇಟ್, ಉಪ ಕಾರ್ಯದರ್ಶಿ ಮೋಹನ್ ಎಂ.ಪಿ. ಭಾಗವಹಿಸಿದ್ದರು. ಉಡುಪಿ, ಕುಂದಾಪುರ, ಕಾರ್ಕಳ ಹಾಗೂ ಸಿದ್ದಾಪುರದ ಎಲ್ಲ ಜುವೆಲರ್ಸ್ ಗಳು ಭಾಗವಹಿಸಿದ್ದರು.


















