ಆಭಾ ಕಾರ್ಡ್ ವಿತರಣೆ ಮತ್ತು ಜೋಡಣೆ: ರಾಜ್ಯಮಟ್ಟದಲ್ಲಿ ಮೂರು ಪ್ರಶಸ್ತಿ ಉಡುಪಿ ಪಾಲು

ಉಡುಪಿ: ಜಿಲ್ಲೆಯಲ್ಲಿ ಅತೀ ಹೆಚ್ಚು ಆಭಾ ಕಾರ್ಡ್ ವಿತರಣೆ, ರಾಜ್ಯದಲ್ಲಿ ಅತೀ ಹೆಚ್ಚು ಆರೋಗ್ಯ ದಾಖಲೆಗಳನ್ನು ಆಭಾ ಕಾರ್ಡಿಗೆ ಜೋಡಣೆ ಮಾಡಿಸಿರುವುದು ಮತ್ತು ಜಿಲ್ಲೆಯ ಕಾರ್ಕಳ ತಾಲೂಕು ಆಸ್ಪತ್ರೆಯು ಆಭಾ ಕಾರ್ಡಿಗೆ ಅತೀ ಹೆಚ್ಚು ಆರೋಗ್ಯ ಕಾರ್ಡ್ಗಳನ್ನು ಜೋಡಿಸಿದ ತಾಲೂಕು ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದರಿಂದ ರಾಜ್ಯಮಟ್ಟದಲ್ಲಿ ಮೂರು ಪ್ರಥಮ ಪ್ರಶಸ್ತಿಗಳು ಜಿಲ್ಲೆಗೆ ಅಭಿಸಿದ್ದು, ಇತ್ತೀಚೆಗೆ ಮೈಸೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಮೈಸೂರು ವಿಭಾಗೀಯ ಮಟ್ಟದ ಪ್ರಗತಿ
ಪರಿಶೀಲನಾ ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಡಾ. ಸುಧಾಕರ್ ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ ಮತ್ತು ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ. ಲತಾ ನಾಯಕ್ ಇವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.